ADVERTISEMENT

₹54 ಲಕ್ಷ ನಗದು, ₹8.53 ಕೋಟಿ ಮೌಲ್ಯದ ಮದ್ಯ ವಶ: ರಾಜ್ಯ ಚುನಾವಣಾ ಆಯೋಗ 

ಏಜೆನ್ಸೀಸ್
Published 15 ಮಾರ್ಚ್ 2019, 10:36 IST
Last Updated 15 ಮಾರ್ಚ್ 2019, 10:36 IST
   

ಬೆಂಗಳೂರು:ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗಿ, ನೀತಿಸಂಹಿತೆ ಜಾರಿಯಾದ ದಿನದಿಂದ ರಾಜ್ಯದಲ್ಲಿ ₹54 ಲಕ್ಷ ನಗದು ಹಾಗೂ ₹8.53 ಕೋಟಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದೇವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗದು ಮತ್ತು ಮದ್ಯದ ಜತೆಗೆ, 650 ಗ್ರಾಂ ಚಿನ್ನ ಮತ್ತು 40 ಕೆ.ಜಿ. ಬೆಳ್ಳಿಯನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

ಇದೇ ವೇಳೆ 1,818 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.