ADVERTISEMENT

‘ನಂಬಿಕೆಗಳನ್ನು ಅವಮಾನ ಮಾಡುವುದು ಜಾತ್ಯತೀತತೆಯೇ?’

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 11:07 IST
Last Updated 28 ಡಿಸೆಂಬರ್ 2020, 11:07 IST
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌   

ಬೆಂಗಳೂರು: ‘ಈ ನೆಲದ ಶ್ರದ್ಧೆ, ನಂಬಿಕೆಗಳನ್ನು ಅವಮಾನ ಮಾಡುವುದನ್ನೇ ಕೆಲವರು ಜಾತ್ಯತೀತತೆ ಎಂಬುದಾಗಿ ನಂಬಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಕಿಡಿಕಾರಿದ್ದಾರೆ.

‘ಹನುಮ ಹುಟ್ಟಿದ ದಿನಾಂಕ ನಿನಗೇನಾದರೂ ಗೊತ್ತಾ? ಚಿಕನ್‌ ತಿನ್ನು ಏನಾಗುವುದಿಲ್ಲ’ ಎಂದು ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಮನೆಯಲ್ಲಿ ಹೇಳಿರುವುದನ್ನು ಉಲ್ಲೇಖಿಸಿ ಸುರೇಶ್‌ ಕುಮಾರ್ ಟ್ವೀಟ್‌ ಮಾಡಿದ್ದಾರೆ. ಹನುಮ ಜಯಂತಿ ಇರುವುದರಿಂದ ಮಾಂಸ ಸೇವೆ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಬೆಂಬಲಿಗರೊಬ್ಬರು ಮಾಂಸ ಸೇವನೆ ಮಾಡಿರಲಿಲ್ಲ.

ಈ ನೆಲದ ನಂಬಿಕೆ ಮತ್ತು ಶ್ರದ್ಧೆಯನ್ನು ಅವಮಾನ ಮಾಡುವ ಮೂಲಕ ಏನು ಸಾಧಿಸುತ್ತಾರೆ? ಇದು ಅಗತ್ಯವಿತ್ತೇ? ಹಿಂದೆ ಒಬ್ಬ ನಾಯಕರು ರಾಮ ಹುಟ್ಟಿದ್ದಕ್ಕೆ ಬರ್ತ್‌ ಸರ್ಟಿಫಿಕೇಟ್‌ ಇದೆಯಾ ಎಂದು ಕೇಳಿದ್ದು ನೆನಪಿಗೆ ಬರುತ್ತಿದೆ. ಇಂತಹವರು ಈ ನೆಲದ ನಂಬಿಕೆಗಳ ಬಗ್ಗೆ ಗೌರವ ಇರುವ ಅಸಂಖ್ಯಾತ ಜನತೆಯಿಂದ ದೂರ ಸರಿಯುತ್ತಿದ್ದಾರೆ ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.