ADVERTISEMENT

ನಾಗರಹೊಳೆ: ಸಫಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:10 IST
Last Updated 12 ಅಕ್ಟೋಬರ್ 2020, 8:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಣಸೂರು (ಮೈಸೂರು): ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಭಾನುವಾರ ಸಫಾರಿ ಪುನರಾರಂಭಿಸಲಾಗಿದೆ.

ಕೋವಿಡ್‌–19 ಕಾರಣ ಕಳೆದ ಏಳು ತಿಂಗಳಿನಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈಗ ನಿರ್ಬಂಧ ತೆರವುಗೊಳಿಸಿದ್ದು, ಸಫಾರಿಗೆ ಬೆಳಿಗ್ಗೆ 6 ಮತ್ತು 7.30ಕ್ಕೆ, ಮಧ್ಯಾಹ್ನ 2 ಮತ್ತು 3.30 ಕ್ಕೆಟಿಕೆಟ್‌ ವಿತರಿಸಲಾಗುತ್ತದೆ.

‘ಸಫಾರಿ ಪುನರಾರಂಭವಾದ ಮೊದಲ ದಿನ ಸಾರ್ವಜನಿಕರ ಸಂಖ್ಯೆ ಕಡಿಮೆ ಇತ್ತು. ಈ ಕಾರಣ ಬೆಳಿಗ್ಗೆ ಒಂದು ಟ್ರಿಪ್ ಮಾತ್ರ ಸಫಾರಿ ನಡೆಸಲಾಗಿದೆ. ಕೋವಿಡ್‌ ಮುನ್ನೆಚ್ಚರಿಕೆ ಕ್ರಮಕೈಗೊಂಡು ಪ್ರವೇಶ ನೀಡಲಾಗುತ್ತಿದೆ’ಎಂದು ನಾಗರಹೊಳೆ ಎಸಿಎಫ್‌ ಗೋಪಾಲ್ ತಿಳಿಸಿದರು.

ADVERTISEMENT

700 ಕಿಟ್‌: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ದಿನ ಬಳಕೆಯ ವಿವಿಧ ಸಾಮಗ್ರಿ ಹೊಂದಿರುವ 700 ಕಿಟ್‌ ವಿತರಿಸಲು ರೋಹಿಣಿ ನಿಲೇಕಣಿ ಫಿಲಂಥ್ರಾಪಿಸ್‌ (ಆರ್‌ಎನ್‌ಪಿ) ಮುಂದಾಗಿದೆ. ಕಿಟ್‌ನಲ್ಲಿ ಷೂ, ಜಾಕೆಟ್‌, ಬ್ಯಾಗ್, ನೀರಿನ ಬಾಟಲಿ, ಮಾಸ್ಕ್‌ ಹಾಗೂ ಕ್ಯಾಪ್‌ ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.