ADVERTISEMENT

ಶಿಮುಲ್‌ನಿಂದ ಸಂಕ್ರಾಂತಿ ಕೊಡುಗೆ: ₹ 2.75 ಹಾಲಿನ ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 15:39 IST
Last Updated 12 ಜನವರಿ 2021, 15:39 IST

ಶಿವಮೊಗ್ಗ: ಕೊರೊನಾ ಲಾಕ್‌ಡೌನ್ ಹೊಡೆತದಿಂದ ಶಿವಮೊಗ್ಗಹಾಲು ಒಕ್ಕೂಟವು ಚೇತರಿಸಿಕೊಳ್ಳುತ್ತಿದ್ದು, ಹಾಲು ಉತ್ಪಾದಕರಿಗೆ ಸಂಕ್ರಾತಿ ಕೊಡುಗೆಯಾಗಿ ಹಾಲಿನ ದರವನ್ನು ₹ 2.75 ಹೆಚ್ಚಳ ಮಾಡಲು ಶಿಮುಲ್ ನಿರ್ಧರಿಸಿದ್ದು, ಜನವರಿ 13ರಿಂದ ಹೊಸ ದರ ಜಾರಿಗೆ ಬರಲಿದೆ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯನ್ನು ಒಳಗೊಂಡ ಶಿಮುಲ್‌ನ ಮುಖ್ಯ ಕಚೇರಿಯಲ್ಲಿ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸದ್ಯ ರೈತರಿಗೆ ಲೀಟರ್‌ಗೆ ₹ 22.50 ಸಿಗುತ್ತಿದ್ದು, ಹೊಸ ದರ ಜಾರಿ ನಂತರ ಲೀಟರ್ ಗೆ ₹ 25.25 ಸಿಗಲಿದೆ. ಹಾಲಿನ ಗುಣಮಟ್ಟಕ್ಕೆ ಅನುಗುಣವಾಗಿ ಮತ್ತಷ್ಟು ಧಾರಣೆ ಸಿಗಲಿದೆ. ಸರ್ಕಾರದ ಪ್ರೋತ್ಸಾಹ ಧನ ಲೀಟರ್‌ಗೆ ₹ 5 ಪ್ರತೇಕ ಸಿಗಲಿದೆ.

ADVERTISEMENT

ಫ್ರೆಬ್ರುವರಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ದರ (ಲೀಟರ್‌ಗೆ ₹ 29)ಅನ್ನು ಶಿಮುಲ್‌ನಿಂದ ನೀಡಲಾಗುತ್ತಿತ್ತು. ಆದರೆ, ಕೊರೊನಾ ಬಳಿಕ ಹಾಲಿನ ಮಾರಾಟ ತೀವ್ರ ಕುಸಿದು ಶೇ 50ಕ್ಕಿಂತ ಕಡಿಮೆಯಾಗಿತ್ತು. ಪ್ರತಿದಿನ ಲಕ್ಷಾಂತರ ಲೀಟರ್ ಹಾಲು ಉಳಿದು ಒಕ್ಕೂಟವು ತೀವ್ರ ಆರ್ಥಿಕ ನಷ್ಟ ಅನುಭವಿಸಿತ್ತು.

ಹಾಲು ಸಂಗ್ರಹ–ಮಾರಾಟ ಹೆಚ್ಚಳ: ಪ್ರಸ್ತುತ ಬಮುಲ್‌ಗೆ ನಿತ್ಯ ಸಂಗ್ರಹ ಆಗುತ್ತಿರುವ ಹಾಲಿನ ಪ್ರಮಾಣವೂ ಹೆಚ್ಚುತ್ತಿದೆ. ಜೊತೆಗೆ ಗ್ರಾಹಕರಿಂದ ಹಾಲಿಗೆ ಬೇಡಿಕೆಯೂ ಬರುತ್ತಿದೆ. ಹೀಗಾಗಿ ರೈತರಿಗೆ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಹಾಲಿನ ದರವನ್ನು ಏರಿಕೆ ಮಾಡಿದೆ. ರೈತರ ಹಾಲಿನ ದರವನ್ನು ಹೆಚ್ಚಳ ಮಾಡಿದರೂ ಗ್ರಾಹಕರು ಖರೀದಿಸುವ ಹಾಲಿದರಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ ಎಂದು ಶಿಮುಲ್ ಅಧ್ಯಕ್ಷ ಡಿ. ಆನಂದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.