ಶಿಕ್ಷಣ ಮಾರ್ಗದರ್ಶಿ
ಬೆಂಗಳೂರು: ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ ಎರಡು ಜತೆ ಸಮವಸ್ತ್ರದ ಬಟ್ಟೆ ಪೂರೈಸಲು ಶಾಲಾ ಶಿಕ್ಷಣ ಇಲಾಖೆ ನಾಲ್ಕು ಸಂಸ್ಥೆಗಳಿಗೆ ಅವಕಾಶ ನೀಡಿದೆ.
ವಿದ್ಯಾವಿಕಾಸ ಯೋಜನೆಯಲ್ಲಿ 2025–26ನೇ ಸಾಲಿಗೆ ಉಚಿತವಾಗಿ ಸಮವಸ್ತ್ರದ ಬಟ್ಟೆ ವಿತರಿಸಲಾಗುತ್ತಿದ್ದು, ಬೆಂಗಳೂರಿನ ಎಚ್‌ಡಿಸಿ ಕಂಪನಿ, ಮಹಾರಾಷ್ಟ್ರದ ಪದಮಚಂದ್ ಮಿಲಾಪಚಂದ್ ಜೈನ್, ಅರವಿಂದ್ ಕಾಟ್ಸಿನ್ ಇಂಡಿಯಾ ಹಾಗೂ ರಾಜಸ್ಥಾನದ ಸಂಗಂ ಇಂಡಿಯಾ ಕಂಪನಿಗಳಿಗೆ ಬಟ್ಟೆ ಪೂರೈಸಲು ಕಾರ್ಯಾದೇಶ ನೀಡಲಾಗಿದೆ. ಪೂರೈಕೆಯಾದ ಬಟ್ಟೆಯ ಗುಣಮಟ್ಟ ಪರೀಕ್ಷಿಸಲು ಪ್ರತಿ ತಾಲ್ಲೂಕಿಗೂ ನೋಡಲ್ ಅಧಿಕಾರಿ, ಮುಖ್ಯ ಶಿಕ್ಷಕರನ್ನು ಒಳಗೊಂಡ ಸಮಿತಿ ರಚಿಸಲು ಸೂಚಿಸಲಾಗಿದೆ.
ಕಂಪನಿಗಳು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ಸರಬರಾಜು ಮಾಡುತ್ತವೆ. ಅಲ್ಲಿಂದ ಶಾಲೆಗಳಿಗೆ ತಲುಪಿಸಲು ಪ್ರತಿ ಬಿಇಒಗಳಿಗೆ ಸಾಗಣೆ ವೆಚ್ಚ ₹20 ಸಾವಿರ ನೀಡಲಾಗುತ್ತಿದೆ. ಇಲಾಖೆ ವಿತರಿಸಿದ ಬಟ್ಟೆಯ ಹೊಲಿಗೆ ವೆಚ್ಚವನ್ನು ಫಲಾನುಭವಿ ಮಕ್ಕಳ ಪೋಷಕರೇ ಭರಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.