ADVERTISEMENT

ಶಾಮನೂರು ಶಿವಶಂಕರಪ್ಪ ಸಿಎಂ ಹುದ್ದೆಗೆ ಹಣಿಕಿ ಹಾಕುತ್ತಿದ್ದಾರೆ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 14:18 IST
Last Updated 24 ಜೂನ್ 2021, 14:18 IST
ಡಿಸಿಎಂ ಗೋವಿಂದ ಕಾರಜೋಳ ಅವರ ಸಾಂದರ್ಭಿಕ ಚಿತ್ರ
ಡಿಸಿಎಂ ಗೋವಿಂದ ಕಾರಜೋಳ ಅವರ ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಬರೀ ಮೂರು ಗುಂಪುಗಳು (ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್) ಮಾತ್ರ ಸೆಣಸುತ್ತಿಲ್ಲ. ಬದಲಿಗೆ ನಾಲ್ಕನೆಯವರಾಗಿ ಶಾಮನೂರು ಶಿವಶಂಕರಪ್ಪ ಕೂಡ ಹಣಿಕಿ ಹಾಕುತ್ತಿದ್ದಾರೆ. ನನಗೆ 91 ವರ್ಷ. ಇನ್ನೂ 100 ಆಗಿಲ್ಲ. ಐದು ವರ್ಷ ಅಧಿಕಾರ ಮಾಡಲು ಏನೂ ತೊಂದರೆ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕುಸ್ತಿ ಇಂದು ನೆನ್ನೆಯದಲ್ಲ. ಈ ಹಿಂದೆ ರಾಜ್ಯದಾದ್ಯಂತ ಸುತ್ತಾಟ ನಡೆಸಿ ಪಕ್ಷ ಸಂಘಟಿಸಿದ್ದ ಡಾ.ಜಿ.ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಸಿಎಂ ರೇಸ್‌ನಿಂದ ಹೊರಗಿಟ್ಟಿದ್ದರು. ಒಬ್ಬರ ಚಡ್ಡಿ ಇನ್ನೊಬ್ಬರು ಹಿಡಿದು ಕುಸ್ತಿ ಆಡಿ ಕೆಳಗೆ ಬಿದ್ದು, ಚಡ್ಡಿ ಕಿತ್ತು ಪ್ರತಿಸ್ಪರ್ಧಿಯನ್ನು ಬೆತ್ತಲಾಗಿಸುವುದು ಆ ಪಕ್ಷದ ಸಂಸ್ಕೃತಿ ಎಂದು ಕಾರಜೋಳ ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.