ADVERTISEMENT

ಆನೆಯತ್ತ ಗುಂಡು: ವಿಡಿಯೊ ವೈರಲ್‌, ಸಿಬ್ಬಂದಿ ವಜಾ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 4:14 IST
Last Updated 12 ಮಾರ್ಚ್ 2020, 4:14 IST
   

ಗುಂಡ್ಲುಪೇಟೆ: ಇಲ್ಲಿನ ಬಂಡೀಪುರ ಹುಲಿ ರಕ್ಷಿತಾರಣ್ಯದ ಯಡಿಯಾಲ ವಲಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ರಹೀಂ ಎಂಬುವವರು ಬೆನ್ನತ್ತಿ ಬರುತ್ತಿದ್ದ ಒಂಟಿ ಸಲಗದತ್ತ ಗುಂಡು ಹಾರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸದ್ಯ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಸೇವೆಯಿಂದ ವಜಾ ಮಾಡಿದ್ದು, ವಿಡಿಯೊ ಮಾಡಿದ ಉಮೇಶ್‌ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಬಂಡೀಪುರ ಹುಲಿ ರಕ್ಷಿತಾರಣ್ಯದ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದ್ದಾರೆ.

ರೈಲ್ವೆ ಕಂಬಿ ಬೇಲಿ ಇದ್ದರೂ ಆನೆಯ ಮುಖದತ್ತ ಬಂದೂಕು ಇಟ್ಟು ಗುಂಡು ಹಾರಿಸಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಆದರೆ, ಆನೆಯು ರೈಲ್ವೆ ಹಳಿ ಬ್ಯಾರಿಕೇಡ್ ದಾಟಲು ಯತ್ನಿಸುತ್ತಿತ್ತು. ಚಲಿಸುತ್ತಿದ್ದ ಜೀಪ್‌ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವಾಗ ಆಯತಪ್ಪಿ ಅದು ಆನೆಯತ್ತ ಹಾರಿದೆ. ಆದರೆ, ಗುಂಡು ಆನೆಗೆ ತಗುಲಿಲ್ಲ ಎಂದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.