ಎಸ್ ಟಿ ಸೋಮಶೇಖರ್
ಬೆಂಗಳೂರು: ‘ನನ್ನ ಜನಪ್ರಿಯತೆ ಸಹಿಸದ ಪಕ್ಷದ ಒಳಗಿನ ಮತ್ತು ಹೊರಗಿನವರು ಮಾಡಿದ ಷಡ್ಯಂತ್ರದಿಂದ ನೋಟಿಸ್ ಪಡೆಯುವಂತಾಗಿದೆ’ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಪಕ್ಷದ ಶಿಸ್ತು ಸಮಿತಿ ನೀಡಿರುವ ಶೋಕಾಸ್ ನೋಟಿಸಿಗೆ ಉತ್ತರ ನೀಡಿದ್ದಾರೆ.
‘ನನ್ನ ವಿರುದ್ಧದ ಆಪಾದನೆಗಳು ಅಸ್ಪಷ್ಟ ಮತ್ತು ಸಮರ್ಥನೀಯವಲ್ಲ. ಅಲ್ಲದೇ ನನ್ನ ಸ್ವತಂತ್ರ ಧ್ವನಿಯನ್ನು ಅಡಗಿಸುವ ಉದ್ದೇಶದ್ದಾಗಿದೆ’ ಎಂದು ಅವರು ಎರಡು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.
‘ಭಾರತೀಯ ಜನತಾ ಪಕ್ಷದ ತತ್ವ, ಆದರ್ಶ, ಸಂಘಟನೆಯ ಏಕತೆಯ ಬಗ್ಗೆ ಬದ್ಧನಾಗಿದ್ದೇನೆ. ಪಕ್ಷದ ಚೌಕಟ್ಟಿನಲ್ಲಿ ಆಂತರಿಕ ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯವನ್ನು ನಂಬಿದ್ದೇನೆ. ಪಕ್ಷವನ್ನು ಸಂಘಟಿಸಲು ಬದ್ಧನಾಗಿದೆ. ಆದರೆ, ಪಕ್ಷದ ಶಿಸ್ತು ಉಲ್ಲಂಘಿಸಿರುವುದಾಗಿ ಮಾಡಿರುವ ಆರೋಪದಿಂದ ಸ್ಥೈರ್ಯಗೆಡಿಸುವಂತೆ ಮಾಡಿದೆ’ ಎಂದು ಹೇಳಿರುವ ಅವರು, ನೋಟಿಸ್ ಹಿಂದಕ್ಕೆ ಪಡೆಯುವಂತೆಯೂ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.