ADVERTISEMENT

ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 17:44 IST
Last Updated 23 ಅಕ್ಟೋಬರ್ 2020, 17:44 IST
ಗುರುವಾರ ರಾತ್ರಿ ಸುರಿದ ಮಳೆಗೆ ಶಿವಮೊಗ್ಗ ನಗರದ ಬೈಪಾಸ್ ಬಳಿ ಲೇಔಟ್‌ಗೆ ನೀರು ನುಗ್ಗಿರುವುದು.
ಗುರುವಾರ ರಾತ್ರಿ ಸುರಿದ ಮಳೆಗೆ ಶಿವಮೊಗ್ಗ ನಗರದ ಬೈಪಾಸ್ ಬಳಿ ಲೇಔಟ್‌ಗೆ ನೀರು ನುಗ್ಗಿರುವುದು.   

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆ ಅಬ್ಬರ ಜೋರಾಗಿದ್ದು, ಶುಕ್ರವಾರ ಶಿವಮೊಗ್ಗ ತಾಲ್ಲೂಕು ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.

ಕೆಲ ತಾಲ್ಲೂಕುಗಳಲ್ಲಿ ಗುರುವಾರ ರಾತ್ರಿಯೂ ಜೋರು ಮಳೆಯಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಒಂದೇ ದಿನ 4.68 ಸೆಂ.ಮೀ. ಮಳೆಯಾಗಿದ್ದು, ಭದ್ರಾವತಿಯಲ್ಲಿ 6.4 ಸೆಂ.ಮೀ, ಶಿಕಾರಿಪುರದಲ್ಲಿ 1.84 ಸೆಂ.ಮೀ ಮಳೆಯಾಗಿದೆ. ಸಾಗರದಲ್ಲೂ ಮಳೆಯಾಗುತ್ತಿದೆ. ಹೊಸನಗರದಲ್ಲಿ ಸಾಧಾರಣ ಮಳೆಯಾಗಿದೆ.

ಗುರುವಾರ ರಾತ್ರಿ ಸುರಿದ ಜೋರು ಮಳೆಗೆ ಶಿವಮೊಗ್ಗ ನಗರದ ಬೈಪಾಸ್ ಬಳಿ ಲೇಔಟ್‌ಗೆ ನೀರು ನುಗ್ಗಿದೆ. ಕೆಲ ಸಮಯ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಡಿದರು.

ADVERTISEMENT

ಚಿತ್ರದುರ್ಗ ಜಿಲ್ಲೆಯ ಕೆಲವೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ. ಚಿತ್ರದುರ್ಗ ನಗರದಲ್ಲಿ ತುಂತುರು ಮಳೆಯಾಗಿದ್ದು, ಹೊಸದುರ್ಗ, ನಾಯಕನಹಟ್ಟಿ, ಚಿಕ್ಕಜಾಜೂರು, ಶ್ರೀರಾಂಪುರದಲ್ಲಿ ಸಾಧಾರಣ ಮಳೆಯಾಗಿದೆ. ಶ್ರೀರಾಂಪುರ ಹೋಬಳಿಯ ಕುರುಬರಹಳ್ಳಿ ಸಮೀಪದ ನಾಕಿಕೆರೆ ಶುಕ್ರವಾರ ಬೆಳಿಗ್ಗೆ ಕೋಡಿ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.