ADVERTISEMENT

ಸಿದ್ಧಗಂಗಾಮಠ: ನೀರಿನ ಕೊರತೆ ವಿದ್ಯಾರ್ಥಿಗಳ ಪ್ರವೇಶ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ಮೇ 2019, 19:19 IST
Last Updated 19 ಮೇ 2019, 19:19 IST
   

ತುಮಕೂರು: ಭವಿಷ್ಯದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸಿದ್ಧಗಂಗಾ ಮಠದ ವಸತಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಸ್ಥಗಿತಗೊಳಿಸಲಾಗಿದೆ.

‘ಈಗಾಗಲೇ ನೀರಿನ ಸಮಸ್ಯೆ ಗಂಭೀರವಾಗಿದೆ. ಹೊಸದಾಗಿ ದಾಖಲಾಗಲು 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಇವರಲ್ಲಿ ಬಹುತೇಕರಿಗೆ ಪ್ರವೇಶ ದೊರೆಯಲಿದೆ. ಮತ್ತಷ್ಟು ಅರ್ಜಿಗಳು ಬಂದರೆ ಅವರನ್ನು ದಾಖಲಿಸಿಕೊಳ್ಳಬೇಕಾಗುತ್ತದೆ. ನೀರಿನ ಸಮಸ್ಯೆ ಕಾರಣಕ್ಕೆ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ 15 ದಿನ ಮುಂಚೆಯೇ ಅರ್ಜಿ ವಿತರಣೆ ಸ್ಥಗಿತಗೊಳಿಸಲಾಗಿದೆ’ ಎಂದು ಮಠದ ಆಡಳಿತಾಧಿಕಾರಿಎಸ್.ವಿಶ್ವನಾಥಯ್ಯ ತಿಳಿಸಿದರು.

‘ನೀರಿನ ಅಭಾವದ ಕಾರಣಕ್ಕೆ ಮಠದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹೆಚ್ಚು ಮಕ್ಕಳನ್ನು ದಾಖಲಿಸಿಕೊಳ್ಳಲು ಆಗುತ್ತಿಲ್ಲ’ಎಂದರು.

ADVERTISEMENT

2019–20ನೇ ಶೈಕ್ಷಣಿಕ ಸಾಲಿನ 1ರಿಂದ 7ನೇ ತರಗತಿ ಮತ್ತು 9 ಮತ್ತು 10ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಅವಧಿ ಮುಗಿದಿದೆ ಎಂದು ಮಠದ ಆವರಣದಲ್ಲಿಪ್ರಕಟಣೆಗಳನ್ನು ಅಂಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.