ADVERTISEMENT

ಸಿದ್ಧಗಂಗಾ ಶ್ರೀಗಳಿಗೆ ಒಂದೂವರೆ ತಿಂಗಳಿನಿಂದ ಆರೋಗ್ಯ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 6:18 IST
Last Updated 21 ಜನವರಿ 2019, 6:18 IST
   

ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಒಂದೂವರೆ ತಿಂಗಳು ಕಳೆದಿದೆ. ಅಂದಿನಿಂದಲೂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸ್ವಾಮೀಜಿ ಅವರಿಗೆ 2018ರನವೆಂಬರ್‌ನಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರ ಆರೋಗ್ಯ ಸುಧಾರಣೆಯಾಗದ ಕಾರಣ ಐ ಕ್ಯಾಟ್ ಏರ್ ಅಂಬುಲೆನ್ಸ್‌ನಲ್ಲಿ ಚೆನ್ನೈನ ರೇಲಾ ಇನ್‌ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು.ಡಾ.ರೇಲಾ ಆಸ್ಪತ್ರೆಯಲ್ಲಿ ಸ್ವಾಮೀಜಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ನಂತರ ತೀವ್ರ ನಿಗಾ ಘಟಕದಲ್ಲಿ ಶನಿವಾರ ಚಿಕಿತ್ಸೆ ನೀಡಲಾಗಿದ್ದು, ಡಿಸೆಂಬರ್19ರಂದು ಸ್ವಾಮೀಜಿ ಅವರನ್ನು ಚೆನ್ನೈನಿಂದ ಮಠಕ್ಕೆ ಕರೆತರಲಾಗಿದೆ. ಬಳಿಕ ಮಠದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಆದರೆ ಮತ್ತೆ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಯಿತು.

ಶ್ವಾಸಕೋಶಕ್ಕೆ ಸೋಂಕು ತಗುಲಿದ್ದರಿಂದ ಬಿಗಡಾಯಿಸಿದ ಆರೋಗ್ಯ:ಆರಂಭದಲ್ಲಿಸ್ವಾಮೀಜಿ ಅವರು ಜ್ವರದಿಂದ ಬಳಲಿದರು. ಆಗ ಶ್ವಾಸಕೋಶದ ಸೋಂಕು ಸಹ ತಗುಲಿದೆ. ಸ್ವಾಮೀಜಿ ಅವರ ಆರೋಗ್ಯ ಚಳಿಗಾಲದಲ್ಲಿ ಬಿಗಡಾಯಿಸುತ್ತದೆ. ಈ ಹಿಂದೆಯೂ ಈ ರೀತಿ ಆಗಿದೆ. ಆದರೆ ಈ ಬಾರಿ ಚಳಿಗಾಲದಲ್ಲಿ ಶ್ವಾಸಕೋಶಕ್ಕೆ ಸೋಂಕು ತಗುಲಿದ ಕಾರಣ ಆರೋಗ್ಯ ಬಿಗಡಾಯಿಸಿತು.

ADVERTISEMENT

*
ಡಿ.7 – ಚೆನ್ನೈ ರೇಲಾ ಆಸ್ಪತ್ರೆಗೆ ಶಿವಕುಮಾರ ಸ್ವಾಮೀಜಿ ದಾಖಲು
ಡಿ.19 – ರೇಲಾ ಆಸ್ಪತ್ರೆಯಿಂದ ಡಿಸ್‌ಚಾರ್ಚ್
ಜ.3 – ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಸ್ವಾಮೀಜಿ ದಾಖಲು
ಜ.16 – ಮರಳಿ ಸಿದ್ಧಗಂಗಾ ಮಠಕ್ಕೆ ಬಂದ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.