ADVERTISEMENT

ಉಸಿರಾಟ ಸಮಸ್ಯೆಯಿಂದ ಸಿದ್ಧಗಂಗಾಶ್ರೀ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 10:30 IST
Last Updated 19 ಜನವರಿ 2019, 10:30 IST
ಶಿವಕುಮಾರ ಸ್ವಾಮೀಜಿ
ಶಿವಕುಮಾರ ಸ್ವಾಮೀಜಿ   

ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗಿದ್ದಉಸಿರಾಟದ ಸಮಸ್ಯೆ ಕಡಿಮೆಯಾಗುತ್ತಿದ್ದು, ಶನಿವಾರ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಸ್ವಾಮೀಜಿ ಸಹಜವಾಗಿ ಉಸಿರಾಟ ನಡೆಸಿದ್ದಾರೆ.

‘ಸ್ವಾಮೀಜಿಸಿದ್ಧಗಂಗಾ ಆಸ್ಪತ್ರೆಯಲ್ಲಿದ್ದಾಗ4-5 ತಾಸು ಸಹಜವಾಗಿ ಉಸಿರಾಡುತ್ತಿದ್ದರು. ಜನವರಿ 16ರ ಬೆಳಿಗ್ಗೆ ಅವರನ್ನು ಮಠಕ್ಕೆ ಸ್ಥಳಾಂತರಿಸಲಾಯಿತು. ಆ ನಂತರ ಕೇವಲ 1 ತಾಸು, ಅರ್ಧ ತಾಸು ಮಾತ್ರ ಸಹಜವಾಗಿ ಉಸಿರಾಡುತ್ತಿದ್ದರು. ಗುರುವಾರ ರಾತ್ರಿಯಿಂದ ಉಸಿರಾಟದಲ್ಲಿಚೇತರಿಕೆ ಕಂಡುಬಂದಿದೆ. ಶುಕ್ರವಾರ ರಾತ್ರಿ 4-5 ತಾಸು ಕೃತಕ ಉಸಿರಾಟದ ಸಹಾಯವಿಲ್ಲದೆ, ಸಹಜವಾಗಿ ಉಸಿರಾಡಿದ್ದರು’ಎಂದು ಚಿಕಿತ್ಸೆ ನೀಡುತ್ತಿರುವ ಸಿದ್ಧಗಂಗಾ ಆಸ್ಪತ್ರೆ ವೈದ್ಯ ಡಾ.ಪರಮೇಶ್ತಿಳಿಸಿದರು.

ಶನಿವಾರ ಬೆಳಿಗ್ಗೆ ನಡೆಸಿದ ತಪಾಸಣೆ, ರಕ್ತ ಪರೀಕ್ಷೆಯ ವರದಿ ಪ್ರಕಾರಶ್ವಾಸಕೋಶದ ಸೋಂಕು ಕಡಿಮೆಯಾದರೂ ಅಲ್ಬುಮಿನ್ ಪ್ರೊಟೀನ್ ಅಂಶ ನಿರೀಕ್ಷಿತ ಮಟ್ಟಕ್ಕೆ ಏರಿಕೆಯಾಗುತ್ತಿಲ್ಲ.ಶುಕ್ರವಾರ 2.7 ಇದ್ದ ಈ ಅಂಶ ಶನಿವಾರಬೆಳಿಗ್ಗೆ ತಪಾಸಣೆ ನಂತರಶೇ 1 ರಷ್ಟು ಮಾತ್ರ ಹೆಚ್ಚಾಗಿದೆ ಎಂದರು.

‘ಶ್ವಾಸಕೋಶದಲ್ಲಿ ನೀರು ಸಂಗ್ರಹ ಆಗುವುದು ಕಡಿಮೆ ಆಗಿಲ್ಲ. ನೀರು ತೆಗೆಯುತ್ತಿದ್ದೇವೆ. ಪ್ರೊಟೀನ್ ಅಂಶ ಹೆಚ್ಚಾದರೆ ನೀರು ಸಂಗ್ರಹ ಆಗುವುದು ಕಡಿಮೆ ಆಗಲಿದೆ. ಸದ್ಯ ಸ್ವಾಮೀಜಿ ಕಣ್ಣು ಬಿಡುತ್ತಾರೆ,ಕೈ, ಕಾಲು ಆಡಿಸುತ್ತಿದ್ದಾರೆ. ಗ್ಲೂಕೋಸ್ ಅನ್ನುಆಹಾರ ರೂಪದಲ್ಲಿ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಅಂಧ ಮಕ್ಕಳಿಂದ ಪಂಚಾಕ್ಷರಿ ಮಂತ್ರ ಪಠಣ

74 ವಿದ್ಯಾರ್ಥಿಗಳಿಂದ ಮಂತ್ರ ಪಠಣ

ಹಳೇಮಠದಲ್ಲಿ ಚಿಕಿತ್ಸೆ ಪಡೆಯುತ್ತಿರುವಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿ ಮಠದ ಅಂಧಮಕ್ಕಳ ಶಾಲೆಯ ಈಗಿನ ಮತ್ತು ಹಳೆಯ ಕೆಲ ವಿದ್ಯಾರ್ಥಿಗಳು ಪಂಚಾಕ್ಷರಿಮಂತ್ರ ಪಠಿಸಿದರು.ಪಂಚಾಕ್ಷರಿ ಮಂತ್ರ ಪಠಣದಿಂದ (ವೈಬ್ರೇಷನ್) ಸ್ವಾಮೀಜಿ ಅವರ ಆರೋಗ್ಯ ಚೇತರಿಕೆ ಆಗಲಿದೆ ಎಂಬ ಆಶಯ ಇವರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.