
ಪ್ರಜಾವಾಣಿ ವಾರ್ತೆಸಿದ್ದರಾಮಯ್ಯ
ಬೆಂಗಳೂರು: ‘ಮೂರು ತಿಂಗಳುಗಳಿಂದ ಇದನ್ನೇ ಕೇಳುತ್ತಿದ್ದೀರಿ. ಎಷ್ಟು ಸಲ ಇದನ್ನೇ ಕೇಳುತ್ತೀರಾ? ಈ ಪ್ರಶ್ನೆ ಮತ್ತೆ ಕೇಳಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಾಯಕತ್ವ ಬದಲಾವಣೆ ವಿಚಾರವಾಗಿ ಸುದ್ದಿಗಾರರು ಬುಧವಾರ ಪ್ರಸ್ತಾಪಿಸಿದಾಗ ಸಿಡಿಮಿಡಿಗೊಂಡ ಅವರು, ‘ಪದೇ ಪದೇ ಯಾಕೆ ನಾಯಕತ್ವ ಬದಲಾವಣೆ ಬಗ್ಗೆ ಕೇಳುತ್ತೀರಿ’ ಎಂದು ಖಾರವಾಗಿಯೇ ಪ್ರಶ್ನಿಸಿದರು.
‘ಹೈಕಮಾಂಡ್ ನಿರ್ಧಾರ ಅಂತಿಮ ಎಂದು ಎಷ್ಟು ಸಲ ಹೇಳಬೇಕು. ಹೈಕಮಾಂಡ್ ಹೇಳಿದರೆ ನಾನೂ ಕೇಳಬೇಕು, ಅವರೂ (ಡಿ.ಕೆ. ಶಿವಕುಮಾರ್) ಕೇಳಬೇಕು’ ಎನ್ನುತ್ತ ಅವರು ಗರಂ ಆದರು.
‘ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ. ಬಜೆಟ್ ಮಂಡಿಸುವ ದಿನವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.