ADVERTISEMENT

ಸಿದ್ದರಾಮಯ್ಯ ನನ್ನ ಪಾಲಿಗೆ ಎರಡನೇ ಅಂಬೇಡ್ಕರ್‌: ಎಚ್.ಆಂಜನೇಯ

'ಒಳಮೀಸಲಾತಿ ಜಾರಿಗೆ ಮಾಡಿದರೆ ಅದೇ ನನಗೆ ದೊಡ್ಡ ಸ್ಥಾನಮಾನ ಕೊಟ್ಟಂತೆ’

​ಪ್ರಜಾವಾಣಿ ವಾರ್ತೆ
Published 19 ಮೇ 2025, 13:21 IST
Last Updated 19 ಮೇ 2025, 13:21 IST
   

ಕೊಪ್ಪಳ: ‘ವಿಧಾನಪರಿಷತ್‌ ಸದಸ್ಯ, ಸಚಿವ ಸೇರಿದಂತೆ ಯಾವ ಸ್ಥಾನಮಾನವೂ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೆ ಮಾಡಿದರೆ ಅದೇ ನನಗೆ ದೊಡ್ಡ ಸ್ಥಾನಮಾನ ಕೊಟ್ಟಂತೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.

‘ಒಳಮೀಸಲಾತಿಗಾಗಿ ಮಾದಿಗ ಸಮುದಾಯದ ಸಾಕಷ್ಟು ಜನ ಪ್ರಾಣ ತೆತ್ತಿದ್ದಾರೆ. ಇದಕ್ಕಾಗಿಯೇ ನಾನು ಸಚಿವನಾಗಬೇಕಿತ್ತು. ಈಗ ಅದೇ ಸಿಕ್ಕರೆ ಉಳಿದ ಯಾವ ಸ್ಥಾನಮಾನಗಳೂ ನಗಣ್ಯ. ನಮ್ಮ ಈಗಿನ ಸರ್ಕಾರದ ಅವಧಿಯಲ್ಲಿಯೇ ಒಳಮೀಸಲಾತಿ ಜಾರಿಯಾಗಲಿದೆ’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

‘ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಹಾಗೂ ಬಿ.ಆರ್‌. ಅಂಬೇಡ್ಕರ್‌ ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಸಿದ್ದರಾಮಯ್ಯ ಅವರೇ ನನ್ನ ಪಾಲಿಗೆ ಎರಡನೇ ಅಂಬೇಡ್ಕರ್‌ ಇದ್ದಂತೆ. ಅವರು ಜೇನುಗೂಡಿಗೆ ಕೈ ಹಾಕಿಲ್ಲ. ಜೇನಿನ ಸಿಹಿಯನ್ನು ಎಲ್ಲರಿಗೂ ಹಂಚಲು ಮುಂದಾಗಿದ್ದಾರೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.