ADVERTISEMENT

ಸಿದ್ದರಾಮಯ್ಯ ಚುನಾವಣೆಗೆ ನಿಲ್ಲೋದಿಲ್ಲ ಎಂದರೆ ನಾವು ಒಪ್ಪೋದಿಲ್ಲ: ಸಚಿವ ಲಾಡ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 9:04 IST
Last Updated 29 ಅಕ್ಟೋಬರ್ 2025, 9:04 IST
ಸಂತೋಷ ಲಾಡ್
ಸಂತೋಷ ಲಾಡ್   

ಬೆಂಗಳೂರು: 'ನಮಗೆ (ಕಾಂಗ್ರೆಸ್ ) ಸಿದ್ದರಾಮಯ್ಯ ನಾಯಕತ್ವ ಬೇಕೇ ಬೇಕು. ನಿರ್ವಿವಾದವಾಗಿ ಇಡೀ ರಾಜ್ಯಕ್ಕೆ ಸಿದ್ದರಾಮಯ್ಯ ನಾಯಕತ್ವ ಬೇಕು.‌ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಸಕ್ರಿಯವಾಗಿರಬೇಕು' ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಸಿದ್ದರಾಮಯ್ಯ ಅವರು ರಾಜಕಾರಣದಿಂದ ನಿವೃತ್ತಿ ಆಗಬಾರದು. ಚುನಾವಣೆಗೆ ನಿಲ್ಲೋದಿಲ್ಲ ಎಂದು ಅವರು ಹೇಳಿದರೂ ನಾವು ಒಪ್ಪೋದಿಲ್ಲ' ಎಂದರು.

'ರಾಜಕಾರಣದಿಂದ ಅವರು ಹೊರಗೆ ಉಳಿಯಬಾರದು ಅನ್ನೋದು ನನ್ನ ವಾದ. ರಾಹುಲ್ ಗಾಂಧಿ ಅನಿವಾರ್ಯತೆ ಅಲ್ವಾ, ಅದೇ ರೀತಿ ಸಿದ್ದರಾಮಯ್ಯ ಅನಿವಾರ್ಯತೆ ಇದೆ ಎಂದರು.

ADVERTISEMENT

'ನಾಯಕತ್ವ ಬದಲಾವಣೆ ಸನ್ನಿವೇಶ, ಅನಿವಾರ್ಯತೆ ಇಲ್ಲ. ನಮ್ಮ‌ ಮುಂದೆ ಅಂಥದ್ದೇನೂ ಇಲ್ಲ, ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದೂ ಹೇಳಿದರು.

ಎರಡೂವರೆ ವರ್ಷಗಳ ಬಳಿಕ ಸಚಿವ ಸ್ಥಾನ ತ್ಯಾಗ ಮಾಡಬೇಕೆಂಬ ಸಚಿವ ಕೃಷ್ಣ ಬೈರೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಲಾಡ್, 'ಎರಡೂವರೆ ವರ್ಷ ಎಂದು ಹೈಕಮಾಂಡ್ ಯಾರ ಬಳಿಯೂ ಮಾತನಾಡಿಲ್ಲ. ನನ್ನ ಬಳಿಯಂತೂ ಯಾರೂ ಈ ರೀತಿ ಹೇಳಿಲ್ಲ. ನನಗೆ ಈ ವಿಚಾರ ಗೊತ್ತಿಲ್ಲ, ಅವರು ಏನು ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.