ADVERTISEMENT

ಅಖಿಲ ಭಾರತ ಕೈಮಗ್ಗ‌ ಮಂಡಳಿ ರದ್ದು: ಕೇಂದ್ರದ ನಿರ್ಧಾರಕ್ಕೆ ಸಿದ್ದರಾಮಯ್ಯ ಆಕ್ರೋಶ 

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 12:36 IST
Last Updated 8 ಆಗಸ್ಟ್ 2020, 12:36 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ಅಭಿಲ ಭಾರತ ಕೈಮಗ್ಗ ಮಂಡಳಿಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಅಖಿಲ ಭಾರತ ಕೈಮಗ್ಗ‌ ಮಂಡಳಿಯನ್ನು ರದ್ದುಪಡಿಸುವ ಮೂಲಕ‌ ನರೇಂದ್ರ ಮೋದಿ ಅವರ 'ಆತ್ಮನಿರ್ಭರ'ದ ಮುಖವಾಡ ಕಳಚಿಬಿದ್ದಿದೆ.‌ ನೀತಿ ನಿರೂಪಣೆ,‌‌ ಕಾರ್ಯಕ್ರಮಗಳ ಮೇಲುಸ್ತುವಾರಿ‌‌ ಮತ್ತು‌ ಕುಂದುಕೊರತೆಗಳ ನಿವಾರಣೆಯ‌ ಕೆಲಸ ಮಾಡುತ್ತಾ, ಕೇಂದ್ರ ಸರ್ಕಾರ ಮತ್ತು ನೇಕಾರರ ನಡುವೆ ಕೊಂಡಿಯಂತಿದ್ದ ಮಂಡಳಿ ರದ್ದತಿ ಖಂಡನೀಯ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಜುಲೈ 27ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಅಖಿಲ ಭಾರತ ಕೈಮಗ್ಗ‌ ಮಂಡಳಿಯನ್ನು ಕೂಡಲೇ ರದ್ದು ಮಾಡಿರುವುದಾಗಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.