ADVERTISEMENT

ಖರ್ಗೆ ಸಿಎಂ ಆಗುವುದನ್ನು ನಾನಂತೂ ತಡೆದಿಲ್ಲ, ತಡೆದವರ ಹೆಸರು ಹೇಳಲಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 6:04 IST
Last Updated 28 ಡಿಸೆಂಬರ್ 2020, 6:04 IST
ಖರ್ಗೆ-ಸಿದ್ದರಾಮಯ್ಯ ಸಂಭಾಷಣೆ
ಖರ್ಗೆ-ಸಿದ್ದರಾಮಯ್ಯ ಸಂಭಾಷಣೆ    

ಮೈಸೂರು: ‘ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ನಾನು ತಡೆದಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಖರ್ಗೆ ಮುಖ್ಯಮಂತ್ರಿ ಆಗುವುದನ್ನು ಕಾಂಗ್ರೆಸ್‌ನವರೇ ಆದ ಒಬ್ಬರು ತಡೆದರು ಎಂಬ ಎಚ್‌.ಡಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ‘ತಡೆದವರ ಹೆಸರನ್ನು ಅವರೇ ಹೇಳಲಿ. ನಾನಂತೂ ತಡೆದಿಲ್ಲ’ ಎಂದರು.

‘ಸಿದ್ದರಾಮಯ್ಯ ಜೆಡಿಎಸ್‌ ಪಕ್ಷ ಕಟ್ಟಿಲ್ಲ’ ಎಂಬ ದೇವೇಗೌಡ ಅವರ ಹೇಳಿಕೆಗೆ, ‘ನಾನು ಆರು ವರ್ಷ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷನಾಗಿದ್ದೆ. ಪಕ್ಷ ಕಟ್ಟಲು ನನ್ನ ಕೊಡುಗೆ ಇಲ್ಲ ಎಂದಾದರೆ ಆರು ವರ್ಷ ಅಧ್ಯಕ್ಷನಾಗಿದ್ದದ್ದು ವ್ಯರ್ಥವಾಯಿತೇ?’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ADVERTISEMENT

ಸ್ನೇಹಿತನ ಮನೆಯಲ್ಲಿ ಮುದ್ದೆಯೂಟ

ಸಿದ್ದರಾಮನಹುಂಡಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಿದ ಬಳಿಕ, ತಮ್ಮ ಸ್ನೇಹಿತನ ಮನೆಯ‌ಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ಸಾರು ಸವಿದರು. ಸ್ವಗ್ರಾಮದ ಜನರ ಜತೆ ತುಂಬಾ ಹೊತ್ತು ಹರಟಿದರು.

ಹನುಮ ಹುಟ್ಟಿದ ತಾರೀಖು ಗೊತ್ತಾ?: ‘ಅಣ್ಣಾ ಇಂದು ಹನುಮ ಜಯಂತಿ. ನಾನು ನಾನ್‌ವೆಜ್‌ ತಿನ್ನಲ್ಲ’ ಎಂದು ಊಟದ ವೇಳೆ ಸ್ನೇಹಿತರೊಬ್ಬರು ಸಿದ್ದರಾಮಯ್ಯ ಅವರಲ್ಲಿ ಹೇಳಿದರು. ಅದಕ್ಕೆ ಉತ್ತರಿಸಿ, ‘ಹನುಮ ಹುಟ್ಟಿದ ತಾರೀಖು ನಿನಗೆ ಗೊತ್ತಾ? ಗೊತ್ತಿದ್ದರೆ ಆ ದಿನ ತಿನ್ನಬೇಡ. ಗೊತ್ತಿಲ್ಲ ಅಂದರೆ ಚಿಕನ್‌ ತಿನ್ನು, ಏನೂ ಆಗ‌ಲ್ಲ’ ಎಂದು ಗದರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.