ಸಿದ್ದರಾಮಯ್ಯ, ಡಿಕೆಶಿ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ‘ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದರೂ, ಸಿದ್ದರಾಮಯ್ಯ ಅವರು ಬಿಟ್ಟುಕೊಡುವುದಿಲ್ಲ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯಾರ ಸೂಚನೆಗೂ ಸಿದ್ದರಾಮಯ್ಯ ತಲೆ ಬಾಗುವುದಿಲ್ಲ, ಸಿಎಂ ಸ್ಥಾನಕ್ಕೆ ರಾಜೀನಾಮೆಯೂ ನೀಡುವುದಿಲ್ಲ. ಅವರ ಹಿಂಬಾಲಕರು ಸಹ ಸಿಎಂ ಸ್ಥಾನದಲ್ಲಿರುವಂತೆ ಸಂಗೀತ ನುಡಿಸುತ್ತಿರುತ್ತಾರೆ. ಇತ್ತ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಅನ್ನುವ ಹಠ ಬಿಡುತ್ತಿಲ್ಲ. ಇವರ ಗುದ್ದಾಟದಲ್ಲಿ ಸರ್ಕಾರ ಪತನವಾಗಲಿದೆ’ ಎಂದರು.
‘ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ’ ಎನ್ನುವ ಎಚ್.ಡಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ‘ಅವರು ರಾಜಕೀಯವಾಗಿ ಅನುಭವ ಇದ್ದ ವ್ಯಕ್ತಿ. ಜೆಡಿಎಸ್‌ನಲ್ಲಿ ಸಿದ್ದರಾಮಯ್ಯ ಅವರು ಇದ್ದಾಗ, ಅವರ ಎಲ್ಲ ಗುಣಗಳನ್ನು ನೋಡಿದವರು. ಆ ಹೇಳಿಕೆಗೆ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಬೇಕು. ಅವರು ಅಧಿಕಾರಕ್ಕಾಗಿ ಇಂತದ್ದನ್ನೆಲ್ಲ ಮಾಡಿರುವ ಉದಾಹರಣೆಗಳು ಇವೆ’ ಎಂದರು.
‘ಕಾಂಗ್ರೆಸ್ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾದರೂ, ಪಕ್ಷ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ದೇವೇಗೌಡರು ಹಿರಿಯ ನಾಯಕರಾಗಿದ್ದು, ಬಹಳಷ್ಟು ಮಂದಿಯನ್ನು ನಾಯಕರನ್ನಾಗಿ ಮಾಡಿ, ಬೆಳೆಸಿದ್ದಾರೆ. ಅವರ ಹೇಳಿಕೆಯಲ್ಲಿ ಸತ್ಯಾಂಶ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.