ADVERTISEMENT

ಹಗರಣಗಳಲ್ಲಿ ಸಿದ್ಧಾರ್ಥ ಹೆಸರಿದೆ, ರಾಜಕಾರಣಿಯ ಕಿರುಕುಳವಿದೆ: ಎಸ್‌.ಆರ್‌ ಹಿರೇಮಠ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 8:12 IST
Last Updated 31 ಜುಲೈ 2019, 8:12 IST
   

ಹುಬ್ಬಳ್ಳಿ: ಡಾರ್ಕ್ ಫೈಬರ್ ಮತ್ತು ಕೊ-ಲೊಕೇಶನ್ ಎಂಬ ಹಗರಣಗಳಲ್ಲಿ ವಿ.ಜಿ.ಸಿದ್ಧಾರ್ಥ ಭಾಗಿಯಾಗಿದ್ದರು.ರಾಜಕಾರಣಿಯೊಬ್ಬರು ಸಿದ್ಧಾರ್ಥ ಅವರಿಗ ಕಿರುಕುಳ ನೀಡುತ್ತಿದ್ದರು ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್‌ ಹಿರೇಮಠ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್.ಆರ್. ಹಿರೇಮಠ ಮಾತನಾಡಿದರು.ಸಿದ್ಧಾರ್ಥ ಅವರ ನಿಗೂಢ ಸಾವಿನ ಕುರಿತು ಪ್ರಾಮಾಣಿಕ ತನಿಖೆ ನಡೆಸಬೇಕು.ಅವರು ಸಾವಿಗೂ ಮೊದಲು ಬರೆದ ಪತ್ರದಲ್ಲಿ ಸತ್ಯ ಮರೆಮಾಚಲಾಗಿದೆ. ಪತ್ರವನ್ನು ಉದ್ದೇಶ ಪೂರಕವಾಗಿ ಬರೆದಂತೆ ಕಾಣುತ್ತಿದೆ.ಅವರ ಸಾವಿನ ಕುರಿತು ಸರ್ಕಾರ ಉನ್ನತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಡಾರ್ಕ್ ಫೈಬರ್ ಮತ್ತು ಕೊ-ಲೊಕೇಶನ್ ಎಂಬ ಹಗರಣದಲ್ಲಿ ವಿ.ಜಿ.ಸಿದ್ದಾರ್ಥ ಅವರು ಭಾಗಿಯಾಗಿದ್ದರು. ಸಿಂಗಪೂರ ಹಾಗೂ ಹಾಂಕಾಂಗ್‌ನಲ್ಲಿರುವಅಲ್ಫಾಗ್ರಾಫ್ ಕಂಪೆನಿಗಳಲ್ಲಿ ದೊಡ್ಡ ಹಗರಣಗಳು ನಡೆದಿವೆ. ಈ ಹಗರಣದಲ್ಲಿ ಸಿದ್ಧಾರ್ಥ ಭಾಗಿ ಆಗಿರುವ ಅನುಮಾನ ತನಿಖಾ ಸಂಸ್ಥೆ ವ್ಯಕ್ತಪಡಿಸಿದೆ. ಇದರ ಜತೆಗೆ ಒಬ್ಬ ರಾಜಕಾರಣಿ ಸಹ ಅವರಿಗೆ ಕಿರುಕುಳ ನೀಡಿದ್ದಾರೆ. ಅವರ ಹೆಸರನ್ನು ನಾ ಈಗ ಬಹಿರಂಗ ಪಡಿಸಲಾರೆ ಎಂದೂ ಅವರು ಹೇಳಿದರು.

ADVERTISEMENT

ಹಗರಣಗಳನ್ನು ಬಹಿರಂಗಪಡಿಸಿ ಅವರ ಸಾವಿನ ಸತ್ಯವನ್ನು ಹೊರತರುವಲ್ಲಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.