ADVERTISEMENT

ಸರ್ವಧರ್ಮ ಪ್ರಾರ್ಥನೆ ಹಾಡಿದ ಟಿ.ಎಂ. ಕೃಷ್ಣ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 18:45 IST
Last Updated 6 ಡಿಸೆಂಬರ್ 2018, 18:45 IST
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ರಾತ್ರಿ ಟಿ.ಎಂ. ಕೃಷ್ಣ ಅವರ ಸರ್ವಧರ್ಮ ಸಂಗೀತ ಕಛೇರಿ ನಡೆಯಿತು. – ಪ‍್ರಜಾವಾಣಿ ಚಿತ್ರ
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ರಾತ್ರಿ ಟಿ.ಎಂ. ಕೃಷ್ಣ ಅವರ ಸರ್ವಧರ್ಮ ಸಂಗೀತ ಕಛೇರಿ ನಡೆಯಿತು. – ಪ‍್ರಜಾವಾಣಿ ಚಿತ್ರ   

ಉಜಿರೆ: ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಬುಧವಾರ ರಾತ್ರಿ ಲಕ್ಷದೀಪೋತ್ಸವ ಅಂಗವಾಗಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರ ಸರ್ವಧರ್ಮ ಪ್ರಾರ್ಥನೆಯು ಇಡೀ ಸಭೆಗೆ ಹೊಸದಿಕ್ಕನ್ನೇ ನೀಡಿದಂತಾಯಿತು.

‘ಶಂಕರಾಭರಣ ರಾಗ’ದಲ್ಲಿ ಸರ್ವಧರ್ಮ ಸಂಗೀತ ಪ್ರಸ್ತುತಪಡಿಸಿ ಸಮ್ಮೇಳನದ ಆಶಯವನ್ನು ಅರ್ಥಪೂರ್ಣಗೊಳಿಸಿದರು.

ಬರೋಬ್ಬರಿ ಎರಡು ಗಂಟೆಗಳ ಕಾಲ ನಡೆದ ಸಂಗೀತ ಕಛೇರಿಯನ್ನು ಶ್ರೋತೃಗಳು ಆನಂದಿಸಿದರು. ಓಂ ತತ್ ಸತ್ ಶ್ರೀ ನಾರಾಯಣ ತು, ಪುರುಷೋತ್ತಮ ಗುರು ತು, ಸಿದ್ಧ ಬುದ್ಧ ತು, ಸ್ಕಂದ ವಿನಾಯಕ, ಸವಿತಾ ಪಾವಕ ತು... ಎಂಬ ಹಾಡನ್ನು ಹಾಡುತ್ತ ಒಂದು ಕ್ಷಣ ಅವರು ಗದ್ಗದಿರಾಗುತ್ತಿದ್ದಂತೆಯೇ ಸಭಾಂಗಣದಲ್ಲಿ ಮೌನ ನೆಲೆಸಿತ್ತು. ಮತ್ತೆ ಸಂಗೀತ ಧಾರೆಯನ್ನು ಮುಂದುವರಿಸುತ್ತ, ವಚನಗಳನ್ನು ಹಾಡಿ ಕೂಡಲಸಂಗಮನನ್ನು ನೆನೆದರು. ಜಗದೋದ್ಧಾರನಾ... ಎಂಬ ಕೃಷ್ಣನ ಹಾಡಿನ ಬೆನ್ನಿಗೇ ಸೂಫಿ ಸಂತರ ಹಾಡೊಂದನ್ನು ಕೈಗೆತ್ತಿಕೊಂಡರು.

ADVERTISEMENT

ಬಾಹುಬಲಿಯ ಆದರ್ಶ ಸಾರುವ ಹಾಡು, ಗಾಂಧೀಜಿಯವರ ಪ್ರಸಿದ್ಧ ಪ್ರಾರ್ಥನೆ ‘ರಘುಪತಿ ರಾಘವ ರಾಜಾರಾಮ್‌’ ಹಾಡುಗಳು ಒಂದರ ಹಿಂದೊಂದು ಅಲೆಅಲೆಯಾಗಿ ಮೂಡಿಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.