ADVERTISEMENT

ಸ್ಮಾರ್ಟ್‌ ಸಿಟಿ: ರಾಜ್ಯಕ್ಕೆ ಮೂರು ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 13:56 IST
Last Updated 25 ಆಗಸ್ಟ್ 2023, 13:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನೀಡುವ 2022ನೇ ಸಾಲಿನ ’ಅತ್ಯುತ್ತಮ ರಾಷ್ಟ್ರೀಯ ಸ್ಮಾರ್ಟ್‌ ಸಿಟಿ ಪ್ರಶಸ್ತಿ’ಗೆ ಇಂದೋರ್ ಆಯ್ಕೆಯಾಗಿದೆ. ಸೂರತ್ ಮತ್ತು ಆಗ್ರಾ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿವೆ.

ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತ ನಗರಗಳ ಪಟ್ಟಿಯನ್ನು ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದೆ. ಕರ್ನಾಟಕದ ಮೂರು ನಗರಗಳು ಪ್ರಶಸ್ತಿಗೆ ಪಾತ್ರವಾಗಿವೆ. ನಗರ ಪರಿಸರ ವಿಭಾಗದಲ್ಲಿ ಶಿವಮೊಗ್ಗ ನಗರವು ಪ್ರಶಸ್ತಿಗೆ ಆಯ್ಕೆಯಾಗಿದೆ. ನವೀನ ಕಲ್ಪನೆ ಪ್ರಶಸ್ತಿ ವಿಭಾಗದಲ್ಲಿ ಹುಬ್ಬಳ್ಳಿ–ಧಾರವಾಡ ಪ್ರಶಸ್ತಿ ಪುರಸ್ಕೃತವಾಗಿದೆ. ವಲಯ ಸ್ಮಾರ್ಟ್ ಸಿಟಿ ಪ್ರಶಸ್ತಿ (ದಕ್ಷಿಣ ವಲಯ) ಬೆಳಗಾವಿಗೆ ಲಭಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT