ADVERTISEMENT

ಪುಸ್ತಕ ಖರೀದಿ ಇ–ಟೆಂಡರ್‌ಗೆ ಕೊಕ್

‘ಪ್ರಜಾವಾಣಿ‘ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 17:13 IST
Last Updated 8 ಸೆಪ್ಟೆಂಬರ್ 2020, 17:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡುವ ಇ –ಟೆಂಡರ್ ಕೈಬಿಟ್ಟಿದೆ.

ಇಲಾಖೆಯು ವಿದ್ಯಾರ್ಥಿ ನಿಲಯಗಳ ಗ್ರಂಥಾಲಯಗಳಿಗೆ ಒಂದೇ ಪ್ರಕಾಶನದ ಹೆಚ್ಚಿನ ಪುಸ್ತಕಗಳನ್ನು ಖರೀದಿಸಲು ಮುಂದಾಗಿರುವುದು ಪ್ರಕಾಶಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯು ಆ.30ರಂದು ‘ಒಂದೇ ಪ್ರಕಾಶನ ಸಂಸ್ಥೆಗೆ 'ಕಲ್ಯಾಣ'!’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಇಲಾಖೆಯ ಆಯುಕ್ತ ಡಾ. ರವಿಕುಮಾರ್ ಸುರ್‌ಪುರ್ ಅವರು ಜಿಲ್ಲಾ ಮಟ್ಟದಲ್ಲಿ ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗಿರುವ ಪುಸ್ತಕಗಳು ಯಾವ ಪ್ರಕಾಶನ
ಸಂಸ್ಥೆಯದ್ದು ಎಂಬ ಮಾಹಿತಿಗಳನ್ನು ಕಲೆಹಾಕಿ ಪರಿಶೀಲಿಸಿದ್ದರು.

ಪುಸ್ತಕಗಳು, ಆಟದ ಸಾಮಗ್ರಿಗಳು, ಸೋಲಾರ್ ವಾಟರ್ ಹೀಟರ್ ಸೇರಿದಂತೆ ವಿದ್ಯಾರ್ಥಿ ನಿಲಯಗಳಿಗೆ ವಿವಿಧ ಸಾಮಗ್ರಿಗಳ ಖರೀದಿಗೆ ಕಲಬುರ್ಗಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಇ– ಟೆಂಡೆರ್ ಆಹ್ವಾನಿಸಲಾಗಿತ್ತು. ಈಗ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡುವುದನ್ನುಕೈಬಿಟ್ಟು, ಉಳಿದ ಸಾಮಗ್ರಿಗಳ ಖರೀದಿಗೆ ಇ– ಟೆಂಡರ್‌ನಲ್ಲಿ ತಿದ್ದುಪಡಿ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.