ADVERTISEMENT

ಭಾಗಶಃ ರದ್ದಾಗಿದ್ದ ಎರಡು ರೈಲುಗಳ ಸಂಚಾರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 16:14 IST
Last Updated 27 ಫೆಬ್ರುವರಿ 2026, 16:14 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಮೈಸೂರು: ಮೈಸೂರು ಮತ್ತು ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಬೈಪಾಸ್ ನಡುವೆ ರಸ್ತೆ ಕೆಳಸೇತುವೆ (ಆರ್‌ಯುಬಿ) ಕಾಮಗಾರಿಯ ಕಾರಣ ಭಾಗಶಃ ರದ್ದಾಗಿದ್ದ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗ ತಿಳಿಸಿದೆ.

ADVERTISEMENT

ಫೆ. 11, 14ರಂದು ರೈಲು ರದ್ದಾಗಿತ್ತು. ಫೆ.28ರಂದು ಹಾಗೂ ಮಾರ್ಚ್ 2, 5, 7, 21, 24ರಂದು ಭಾಗಶಃ ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ, ಫೆ.28 ಹಾಗೂ ಮಾರ್ಚ್ 2ರಂದು ಪುನರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದೆ.

ಅರಸೀಕೆರೆ–ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56267) ಈ ಮೊದಲು ಬೆಳಗೊಳ ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿತ್ತು. ಈಗ ಪೂರ್ಣವಾಗಿ ಮರುಸ್ಥಾಪಿಸಲಾಗಿದೆ. ಇದು ಫೆ. 28 ಮತ್ತು ಮಾರ್ಚ್ 2ರಂದು ಅರಸೀಕೆರೆಯಿಂದ ಮೈಸೂರಿನವರೆಗೆ ಎಂದಿನಂತೆ ಸಂಚರಿಸಲಿದೆ.

ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಫೆ.28 ಮತ್ತು ಮಾರ್ಚ್ 2ರಂದು ಮೈಸೂರು ಮತ್ತು ಬೆಳಗೊಳ ನಡುವೆ ಭಾಗಶಃ ರದ್ದಾಗಿತ್ತು, ಇದು ಈಗ ನಿಗದಿತ ವೇಳಾಪಟ್ಟಿಯಂತೆ ಮೈಸೂರಿನಿಂದಲೇ ಸಂಚರಿಸಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.