ADVERTISEMENT

ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ವಂಡರ್‌ಲಾ ವಿಶೇಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 15:28 IST
Last Updated 23 ಡಿಸೆಂಬರ್ 2018, 15:28 IST
ವಂಡರ್‌ ಲಾ
ವಂಡರ್‌ ಲಾ   

ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ಸಲುವಾಗಿ ಮಂಗಳೂರು ಡಾಲ್ ಡಾನ್ಸ್, ನಾಸಿಕ್ ಬ್ಯಾಂಡ್, ಆಹಾರ ಮೇಳ ಮತ್ತು ಕಾರ್ನಿವಲ್ ಅನ್ನು ವಂಡರ್‌ ಲಾದಲ್ಲಿ ಜನವರಿ 1ರವರೆಗೆ ಆಯೋಜಿಸಲಾಗಿದೆ.

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಕೊಡುಗೆಯಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಶೇಕಡ 10ರಷ್ಟುರಿಯಾಯಿತಿಯನ್ನು ವಂಡರ್‌ ಲಾ ಘೋಷಿಸಿದೆ.ಒಂದು ರಾತ್ರಿ ವಾಸ್ತವ್ಯದ, ಕಾಕ್ಟೇಲ್, ಭೋಜನ, ವಿನೋದ ಆಟಗಳು, ಪಟಾಕಿ ಪ್ರದರ್ಶನದವಿಶೇಷ ಪ್ಯಾಕೇಜ್ ಅನ್ನು ಸಹ ನೀಡಲಾಗಿದೆ.

ವಂಡರ್‌ಲಾ ಮುಖ್ಯಸ್ಥ ಎಂ.ಬಿ. ಮಹೇಶ್, ‘ಕ್ರಿಸ್‍ಮಸ್ ಮತ್ತು ಹೊಸ ವರ್ಷವನ್ನು ಸಾಮಾನ್ಯ ಸಂಭ್ರಮಾಚರಣೆಗಿಂತ ವಿಭಿನ್ನವಾಗಿ ಆಚರಿಸುವ ಸಂಪ್ರದಾಯದತ್ತ ಯುವ ಸಮುದಾಯವು ಈಚೆಗೆ ಎದುರು ನೋಡುತ್ತಿದೆ. ಯುವಕ–ಯುವತಿಯರು ಇಷ್ಟ ಪಡುವಂತಹ ವಾತಾವರಣವನ್ನುನಮ್ಮ ಅಮ್ಯೂಸ್‌ಮೆಂಟ್ ಪಾರ್ಕ್‍ನಲ್ಲಿ ಸೃಷ್ಟಿಸಲಾಗಿದ್ದು, ವಂಡರ್‌ಲಾಗೆ ಭೇಟಿ ನೀಡಿ ತಾವು ಅಂದು ಕೊಂಡತೆ ಅವರು ಈ ಬಾರಿ ಸಂಭ್ರಮ ಮಾಡಬಹುದು’ ಎಂದರು.

ADVERTISEMENT

ಇಲ್ಲಿ, ಥ್ರಿಲ್ ರೈಡ್‍ಗಳ ಅನುಭವಕ್ಕಾಗಿ ನಿಗದಿತ ಡ್ರೆಸ್ ಕೋಡ್‍ಗಳಿವೆ. ಪರಿಸರ ಕಾಳಜಿ ಹಾಗೂಅತಿಥಿಯ ಸುರಕ್ಷತೆ ದೃಷ್ಟಿಯಿಂದ ವಾಟರ್ ರೈಡ್‍ಗಳು ಮತ್ತು ಹೈ ಥ್ರಿಲ್ ರೈಡ್‍ಗಳಿಗೆ ಡ್ರೆಸ್ ಕೋಡ್ ಕಡ್ಡಾಯ ಮಾಡಲಾಗಿದೆ. ನೈಲಾನ್ ಹಾಗೂ ಸಿಂಥೆಟಿಕ್ ಬಟ್ಟೆಗಳನ್ನು ಜನರು ಬಳಸಬೇಕಿದ್ದು, ಅವುಗಳನ್ನುಮನೆಗಳಿಂದ ತರಬಹುದು ಅಥವಾ ಪಾರ್ಕ್‌ನಲ್ಲಿಯೇ ಖರೀದಿಸಬಹುದು.

ಹೆಚ್ಚಿನ ಮಾಹಿತಿಗೆ: www.wonderla.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.