ADVERTISEMENT

ಕಾಂಗ್ರೆಸ್‌ಗೆ ‘ಶಕುನಿ’ಯಿಂದ ಸೋಲು| ಡಿಕೆಶಿ ಕಾಲೆಳೆದ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:46 IST
Last Updated 22 ಜೂನ್ 2019, 19:46 IST
   

ಬೆಂಗಳೂರು: ‘ಕುರುಕ್ಷೇತ್ರ ಯುದ್ಧದಲ್ಲಿ ಸೋಲಲು ಶಕುನಿಯೇ ಕಾರಣವೆಂಬುದು ಅಂತ್ಯದಲ್ಲಿ ಕೌರವರಿಗೆ ಗೊತ್ತಾಗಿತ್ತು. ಈಗ ರಾಜ್ಯ ಕಾಂಗ್ರೆಸ್‌ಗೆ ಆ ಪಕ್ಷದಲ್ಲಿರುವ ಶಕುನಿಯಿಂದಲೇ ಸೋಲಾಗಿದೆ’ ಎಂದು ಬಿಜೆಪಿಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್ ಅವರ ಕಾಲೆಳೆದಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಬಿಜೆಪಿ ಸೇರಲು ವಿಮಾನ ನಿಲ್ದಾಣದಲ್ಲೇ ಆಫರ್‌ ಕೊಟ್ಟಿದ್ದಾಗಿ ಡಿ.ಕೆ.ಶಿವಕುಮಾರ್‌ ಹೆಸರು ಪ್ರಸ್ತಾಪಿಸದೇ ಹೇಳಿಕೆ ನೀಡಿದ್ದರು. ಬಳ್ಳಾರಿಯಲ್ಲಿ ನಾನೇ ಸುಪ್ರೀಂ ಎಂದು ಪೋಸು ಕೊಡುತ್ತಿದ್ದ ಅವರು ಈಗ ಮೂಲೆ ಸೇರಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಆ ಕಡೆ ತಿರುಗಿ ನೋಡದಂತೆ ಆಗಿದೆ’ ಎಂದು ಶ್ರೀರಾಮುಲು ಹೇಳಿದರು.

‘ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಮಣ್ಣು ಮುಕ್ಕಿದ ಮೇಲೆಯೇ ಶಕುನಿಯ ಆಟ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಾಯಿತು. ಮೈತ್ರಿ ಸರ್ಕಾರದ ಪತನದ ನಂತರ ಶಕುನಿ ಒಬ್ಬನೇ ಉಳಿಯುತ್ತಾನೆ. ಆ ಶಕುನಿ ಯಾರು ಎನ್ನುವುದು ಗೊತ್ತಾಗುತ್ತದೆ. ಶಕುನಿ ಆಟ ಹೆಚ್ಚು ದಿನ ನಡೆಯುವುದಿಲ್ಲ’ ಎಂದರು.

ADVERTISEMENT

ಕಾಂಗ್ರೆಸ್‌ ಪಕ್ಷ ಈಗ ದೇಶದಲ್ಲೇ ಅಸ್ತಿತ್ವದಲ್ಲಿ ಇಲ್ಲ. ಇಲ್ಲಿ ಕೆಲವರು ಪ್ರಚಾರಕ್ಕಾಗಿ ಮಾತನಾಡುತ್ತಾರೆ. ನಕಾರಾತ್ಮಕ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.