ADVERTISEMENT

ಎಸ್ಎಸ್‌ಎಲ್‌ಸಿ ಫಲಿತಾಂಶ | ಜಿಲ್ಲೆಗಳಿಗೆ ರ‍್ಯಾಂಕಿಂಗ್‌ ಬದಲು ಗ್ರೇಡ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 11:08 IST
Last Updated 10 ಆಗಸ್ಟ್ 2020, 11:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 2019–20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು,ಜಿಲ್ಲೆಗಳಿಗೆಇದೇ ಮೊದಲ ಬಾರಿಗೆ ರ‍್ಯಾಂಕಿಂಗ್‌ ಬದಲು, ಎ,ಬಿ ಮತ್ತು ಸಿ ಎಂದು ಗ್ರೇಡ್‌ ಕೊಡಲಾಗಿದೆ.

ಒಂದು ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಶೇ 40ರಷ್ಟು, ಉಳಿದ ಪ್ರಮಾಣವನ್ನು ಅತ್ಯುನ್ನತ ದರ್ಜೆ ಮತ್ತು ಪ್ರಥಮ ದರ್ಜೆ ಪಡೆದ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಗ್ರೇಡ್ ನೀಡಲಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ, ಕೋಲಾರ, ಉಡುಪಿ, ರಾಮನಗರ, ಹಾಸನ, ಉತ್ತರ ಕನ್ನಡ ಜಿಲ್ಲೆ ‘ಎ’ ಗ್ರೇಡ್‌ನಲ್ಲಿವೆ.

kseeb.kar.nic.in, karresults.nic.in ಮತ್ತುresults.nic.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಿದೆ.ಮಂಗಳವಾರ ಬೆಳಿಗ್ಗೆ ಆಯಾ ಶಾಲೆಗಳಲ್ಲಿ ಫಲಿತಾಂಶ ನೋಡಬಹುದು.

ADVERTISEMENT

ಜಿಲ್ಲಾವಾರು ಗ್ರೇಡ್‌ ವಿವರ

ರಾಮನಗರಕ್ಕೆ ಎ ಗ್ರೇಡ್
ರಾಮನಗರ:
ಜಿಲ್ಲೆಯು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎ ಗ್ರೇಡ್ ನೊಂದಿಗೆ ಎಂಟನೇ ಸ್ಥಾನ ಪಡೆದಿದೆ‌. ಕಳೆದ ವರ್ಷ ಜಿಲ್ಲೆಯು ಎರಡನೇ ಸ್ಥಾನ ಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿತ್ತು. ಈ ವರ್ಷ ಆರು ಸ್ಥಾನ ಕೆಳಕ್ಕೆ ಕುಸಿದಿದೆ.

ಮಧುಗಿರಿ ‘ಎ’, ತುಮಕೂರು ‘ಬಿ’ ಗ್ರೇಡ್
ತುಮಕೂರು:
ಮಧುಗಿರಿ ಶೈಕ್ಷಣಿಕ ಜಿಲ್ಲೆಯು ‘ಎ’ ಮತ್ತು ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ‘ಬಿ’ ಗ್ರೇಡ್ ಫಲಿತಾಂಶಕ್ಕೆ ಭಾಜನವಾಗಿದೆ. ಕುಣಿಗಲ್ ತಾಲ್ಲೂಕಿನ ಜ್ಞಾನ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿ ಮಹೇಶ್ 624 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿ (ಎರಡೂ ಶೈಕ್ಷಣಿಕ ಜಿಲ್ಲೆ ಸೇರಿ) ಹೆಚ್ಚು ಅಂಕ ಪಡೆದಿದ್ದಾರೆ.

ಚಿಕ್ಕೋಡಿಗೆ ‘ಬಿ’, ಬೆಳಗಾವಿಗೆ ‘ಸಿ’ ಗ್ರೇಡ್
ಬೆಳಗಾವಿ:
ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ‘ಬಿ’ ಗ್ರೇಡ್ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯು ‘ಸಿ’ ಗ್ರೇಡ್ ಗಳಿಸಿದೆ.

ಕೊರೊನಾ ಸೋಂಕಿನ ಆತಂಕದ ನಡುವೆಯೂ ‍ಪರೀಕ್ಷೆ ನಡೆದಿತ್ತು. ಈ ಬಾರಿ ‘ಗ್ರೇಡ್‌ ಪರಿಚಯಿಸಲಾಗಿದೆ.

2018-19ನೇ ಸಾಲಿನ ಪರೀಕ್ಷೆಯಲ್ಲಿ ಶೇ 77.43 ಫಲಿತಾಂಶದೊಂದಿಗೆ 24ನೇ ಸ್ಥಾನ ಗಳಿಸಿದ್ದ ಬೆಳಗಾವಿ, ಈ ಬಾರಿ ‘ಸಿ’ ಗ್ರೇಡ್‌ಗೆ ಕುಸಿದಿದೆ. ಕಳೆದ ಸಾಲಿನ ಪರೀಕ್ಷೆಯಲ್ಲಿ ಶೇ 84.09 ಫಲಿತಾಂಶದೊಂದಿಗೆ 13ನೇ ಸ್ಥಾನ ಪಡೆದಿದ್ದ ಚಿಕ್ಕೋಡಿ ಈ ಬಾರಿ ‘ಬಿ’ ಗ್ರೇಡ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.