ADVERTISEMENT

13 ಐಎಎಸ್‌ ಅಧಿಕಾರಿಗಳ ನಿಯೋಜನೆ: ರಾಜ್ಯ ಸರ್ಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 8:39 IST
Last Updated 25 ಆಗಸ್ಟ್ 2020, 8:39 IST
ರಾಜ್ಯ ಸರ್ಕಾರ
ರಾಜ್ಯ ಸರ್ಕಾರ   

ಬೆಂಗಳೂರು: 2017ನೇ ಸಾಲಿನಲ್ಲಿ ಕರ್ನಾಟಕ ಕೇಡರ್‌ನಲ್ಲಿ ಐಎಎಸ್‌ ಪಡೆದು ಉಪ ವಿಭಾಗಾಧಿಕಾರಿ ಹುದ್ದೆಯಲ್ಲಿ ಪ್ರೊಬೇಷನರಿ ಅವಧಿ ಮುಗಿಸಿರುವ ನಾಲ್ವರು ಅಧಿಕಾರಿಗಳನ್ನು ಸಾಮಾನ್ಯ ಹುದ್ದೆಗಳಿಗೆ ವರ್ಗಾವಣೆಗೊಳಿಸಿ ಹಾಗೂ ‍2018ರಲ್ಲಿ ಐಎಎಸ್ ಪಡೆದು ಸ್ಥಳ ನಿರೀಕ್ಷೆಯಲ್ಲಿದ್ದ ಒಂಬತ್ತು ಪ್ರೊಬೇಷನರಿ ಅಧಿಕಾರಿಗಳನ್ನು ಉಪ ವಿಭಾಗಾಧಿಕಾರಿ ಹುದ್ದೆಗೆ ನೇಮಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಪ್ರೊಬೇಷನರಿ ಅವಧಿ ಮುಗಿಸಿರುವ ನಂದಿನಿ ಕೆ. ಆರ್‌ ಅವರನ್ನು ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದೆ. ಅಕ್ಷಯ್‌ ಶ್ರೀಧರ್ ಅವರನ್ನು ಆಯುಕ್ತ, ಮಂಗಳೂರು ನಗರಪಾಲಿಕೆ, ಲೋಕಂಡೆ ಸ್ನೇಹಲ್‌ ಸುಧಾಕರ್‌ ಅವರನ್ನು ಆಯುಕ್ತರು, ಕಲಬುರ್ಗಿ ನಗರಪಾಲಿಕೆ, ಭನ್ವಾರ್ ಸಿಂಗ್‌ ಮೀನಾ ಅವರನ್ನು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದೆ.

ಉಪ ವಿಭಾಗಾಧಿಕಾರಿಗಳಾಗಿ ನೇಮಕಗೊಂಡವರು: ಡಾ. ಗಿರೀಶ್‌ ದಿಲೀಪ್‌ ಬಡೋಲೆ– ಉಪ ವಿಭಾಗಾಧಿಕಾರಿ, ಕೊಳ್ಳೆಗಾಲ ಉಪ ವಿಭಾಗ. ಆಕೃತಿ ಬನ್ಸಾಲ್‌– ಉಪ ವಿಭಾಗಾಧಿಕಾರಿ, ಶಿರಸಿ ಉಪ ವಿಭಾಗ. ದಿಗ್ವಿಜಯ್ ಬೋಡ್ಕೆ– ಉಪ ವಿಭಾಧಿಕಾರಿ, ತಿಪಟೂರು ಉಪ ವಿಭಾಗ. ರಾಹುಲ್‌ ಶಿಂಧೆ– ಉಪ ವಿಭಾಗಾಧಿಕಾರಿ, ಇಂಡಿ ಉಪ ವಿಭಾಗ. ಈಶ್ವರ್ ಕುಮಾರ್ ಕಂಡೂ– ಉಪ ವಿಭಾಗಾಧಿಕಾರಿ, ಮಡಿಕೇರಿ ಉಪ ವಿಭಾಗ. ಗರಿಮಾ ಪನ್ವಾರ್‌– ಉಪ ವಿಭಾಗಾಧಿಕಾರಿ, ಬೀದರ್‌ ಉಪ ವಿಭಾಗ. ಡಾ. ಗೋಪಾಲಕೃಷ್ಣ ಬಿ.– ಉಪ ವಿಭಾಗಾಧಿಕಾರಿ, ಧಾರವಾಡ ಉಪ ವಿಭಾಗ. ಉಕೇಶ್‌ ಕುಮಾರ್– ಉಪ ವಿಭಾಗಾಧಿಕಾರಿ, ಚಿಕ್ಕೋಡಿ ಉಪ ವಿಭಾಗ. ಪಾಟೀಲ ಭುವನೇಶ್ ದೇವಿದಾಸ್‌– ಉಪ ವಿಭಾಗಾಧಿಕಾರಿ, ಬಸವಕಲ್ಯಾಣ ಉಪ ವಿಭಾಗ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.