ADVERTISEMENT

ಕಾಲೇಜು ಬದಲಿಗೆ ನಿರ್ಬಂಧ: ಅತಂತ್ರ ಸ್ಥಿತಿ

ಖಾಲಿ ಉಳಿದ ಬಿ.ಇ ಸೀಟುಗಳನ್ನು ಡಿಸಿಇಟಿ ವಿದ್ಯಾರ್ಥಿಗಳಿಗೆ ನೀಡಲು ಮುಂದಾದ ಸರ್ಕಾರ

ಇಮಾಮ್‌ಹುಸೇನ್‌ ಗೂಡುನವರ
Published 4 ಜನವರಿ 2023, 22:08 IST
Last Updated 4 ಜನವರಿ 2023, 22:08 IST
   

ಬೆಳಗಾವಿ: ಕಾಲೇಜು ಅಥವಾ ವಿಭಾಗ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದ ಬ್ಯಾಚು ಲರ್‌ ಆಫ್‌ ಎಂಜಿನಿಯರಿಂಗ್‌ (ಬಿ.ಇ) 3ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು, ರಾಜ್ಯ ಸರ್ಕಾರ ಬದಲಿಸಿದ ನಿಯಮದಿಂದಾಗಿ ಅತಂತ್ರರಾಗಿದ್ದಾರೆ.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವ್ಯಾಪ್ತಿಯಲ್ಲಿ 212 ಎಂಜಿನಿಯರಿಂಗ್‌ ಕಾಲೇಜು ಗಳಿದ್ದು, 2.50 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

2022ರ ಡಿಸೆಂಬರ್ 9ರಂದು ಅಧಿಸೂಚನೆ ಹೊರಡಿಸಿದ್ದ ವಿಟಿಯು, ತನ್ನ ವ್ಯಾಪ್ತಿಗೊಳಪಡುವ ಹಾಗೂ ಸ್ವಾಯತ್ತ ಕಾಲೇಜು ವಿದ್ಯಾರ್ಥಿ
ಗಳಿಂದ ಕಾಲೇಜು ಅಥವಾ ವಿಭಾಗ ಬದಲಾವಣೆಗೆ ಅರ್ಜಿ ಆಹ್ವಾನಿಸಿತ್ತು. ಅಂತಿಮ ದಿನವಾದ ಡಿಸೆಂಬರ್ 15
ರವರೆಗೆ ಸಾಕಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.

ADVERTISEMENT

ವರ್ಗಾವಣೆ ಶುಲ್ಕವನ್ನೂ ಭರಿಸಿದ್ದರು. ವಿಟಿಯು ಹಲವು ವರ್ಷಗಳಿಂದ ಕಾಲೇಜು ಬದಲಾವಣೆಗೆ ಅನುಮತಿ ನೀಡುತ್ತ ಬಂದಿದೆ. ಈ ಬಾರಿಯೂ ಅವಕಾಶ ಕಲ್ಪಿಸಿತ್ತು.

ಆದರೆ, ಈಗ ಬಿ.ಇ 3ನೇ ಸೆಮಿಸ್ಟರ್‌ನಲ್ಲಿ ಖಾಲಿ ಉಳಿದ ಸೀಟುಗಳನ್ನು ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಡಿಸಿಇಟಿ) ಹಾಜರಾದ ವಿದ್ಯಾರ್ಥಿಗಳಿಗೆ ನೀಡುವುದಾಗಿ ಉನ್ನತ ಶಿಕ್ಷಣ ಇಲಾಖೆ ಸೂಚಿಸಿರುವುದು ಈ
ವಿದ್ಯಾರ್ಥಿಗಳಿಗೆ ಸಂಕಷ್ಟ ತಂದಿದೆ.

‘ಈ ಹಿಂದೆ ಯಾವುದೇ ಎಂಜಿನಿ ಯರಿಂಗ್‌ ಕಾಲೇಜಿನಲ್ಲಿ 3ನೇ ಸೆಮಿಸ್ಟರ್‌ ಸೀಟುಗಳು ಖಾಲಿ ಉಳಿದಿದ್ದರೆ,
ಬೇರೆ ಕಾಲೇಜಿನ ವಿದ್ಯಾರ್ಥಿಗಳು ಪಡೆಯ
ಬಹುದಿತ್ತು. ಈ ಬಾರಿ ಆ ಸೀಟುಗಳನ್ನು ಡಿಸಿಇಟಿಗೆ ಹಾಜರಾದ ವಿದ್ಯಾರ್ಥಿ
ಗಳಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ, ಬಿ.ಇ ವಿದ್ಯಾರ್ಥಿಗಳು ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜು ಮತ್ತು ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಪಡೆಯುವಂತಿಲ್ಲ’ ಎಂದು ವಿಟಿಯು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಮ್ಮಗತಿ ಏನು?: ‘ನಾವು ಕಾಲೇಜು ಬದಲಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದೆವು. ಹಿಂದೆ ಅಭ್ಯಸಿಸುತ್ತಿದ್ದ ಮತ್ತು ಈಗ ಪ್ರವೇಶ ಬಯಸಿರುವ ಎಂಜಿನಿಯರಿಂಗ್‌ ಕಾಲೇಜುಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರ ತಂದಿದ್ದೇವೆ. ಸರ್ಕಾರ ಏಕಾಏಕಿಯಾಗಿ ನಿಯಮ ಬದಲಿಸಿ ದರೆ ನಮ್ಮ ಗತಿ ಏನು?’ ಎಂದು ಹಲವು ವಿದ್ಯಾರ್ಥಿಗಳು ಅಳಲು ತೋಡಿ ಕೊಂಡರು.

ಕಲಿಕೆಗೆ ತೊಂದರೆಯಾಗುತ್ತದೆ: ‘ಅರ್ಜಿ ಆಹ್ವಾನಿಸಿ, ವರ್ಗಾವಣೆ ಶುಲ್ಕ ಕಟ್ಟಿಸಿಕೊಂಡು ನಿಯಮ
ಬದಲಿಸಿದರೆ ನೂರಾರು ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತು, ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಮೂರನೇ ಸೆಮಿಸ್ಟರ್‌ನ ತರಗತಿಗಳು ಆರಂಭವಾಗಿ ಎರಡು ತಿಂಗಳಾಗಿವೆ. ವಿಳಂಬವಾದರೆ ಕಲಿಕೆಗೆ ತೊಂದರೆಯಾಗುತ್ತದೆ’ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತ
ಪಡಿಸಿದರು.

ಸರ್ಕಾರದ ಮಾರ್ಗಸೂಚಿ ಯಂತೆ ಬಿ.ಇ 3ನೇ ಸೆಮಿ ಸ್ಟರ್‌ ವಿದ್ಯಾರ್ಥಿಗಳು ಒಂದು ಕಾಲೇಜಿನಿಂದ ಬೇರೆ ಕಾಲೇಜಿಗೆ ವರ್ಗಾವಣೆ ಪಡೆಯಲು ಅವಕಾಶವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.