ADVERTISEMENT

ಮಾಸಾಶನ ದೊರೆಯದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಂಗವಿಕಲ: ತನಿಖೆಗೆ ಆದೇಶ

ವಾರ್ಷಿಕ ₹ 15 ಸಾವಿರ ಆದಾಯ; ಮಾಸಾಶನಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 9:12 IST
Last Updated 12 ಫೆಬ್ರುವರಿ 2019, 9:12 IST
   

ತುಮಕೂರು: ಮಾಸಾಶನ ದೊರೆಯದಿದ್ದಕ್ಕೆ ಮನ ನೊಂದು ತಾಲ್ಲೂಕಿನ ಕೋರ ಹೋಬಳಿಯ ಲಿಂಗಯ್ಯನ ಪಾಳ್ಯದ ಅಂಗವಿಕಲ ಧರಣಿಂದ್ರ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧರಣಿಂದ್ರ ಈ ಹಿಂದೆ ಮಾಸಾಶನ ಪಡೆಯುತ್ತಿದ್ದರು. ನವೀಕರಣದ ಸಮಯದಲ್ಲಿ ವಾರ್ಷಿಕ ₹ 15 ಸಾವಿರ ಆದಾಯ ಇದೆ ಎಂದು ಆದಾಯ ಪ್ರಮಾಣ ಪತ್ರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನಮೂದಿಸಿದರು‌. ಇದರಿಂದ ಮಾಸಾಶನಕ್ಕೆ ತಡೆ ಬಿದ್ದಿತು. ಸಾಯುವ ಮುನ್ನ ಈ ಬಗ್ಗೆ ವಿಡಿಯೊ ಸಹ ಮಾಡಿದ್ದಾರೆ. ಅದರಲ್ಲಿ ತಹಶಿಲ್ದಾರರ್ ಪರಮೇಶ್ ಎಂಬುವವರು ಮಾಸಾಶನ ಬರುವುದಿಲ್ಲ ಎಂದಿರುವುದನ್ನು ಧರಣಿಂದ್ರ ಉಲ್ಲೇಖಿಸಿದ್ದಾರೆ.

ತನಿಖೆ: ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ವಿಡಿಯೊದಲ್ಲಿ ಹೆಸರಿಸಿರುವ ಪರಮೇಶ್ಎಂಬುವವರು ನಮ್ಮಲ್ಲಿ ಕೇಸ್ ವರ್ಕರ್ ಇದ್ದಾರೆ. ತಪ್ಪು ಕಂಡು ಬಂದಲ್ಲಿ ಅಮಾನತುಗೊಳಿಸಲಾಗುವುದು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.