ADVERTISEMENT

ವೈದ್ಯ ಸೂರಿರಾಜುಗೆ ‘ಗೋಲ್ಡನ್‌ ಬುಕ್‌’ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 17:13 IST
Last Updated 31 ಜನವರಿ 2022, 17:13 IST
ಡಾ.ವಿ.ಸೂರಿರಾಜು
ಡಾ.ವಿ.ಸೂರಿರಾಜು   

ಬೆಂಗಳೂರು: ರೀಗಲ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿ.ಸೂರಿರಾಜು ಬರೆದಿರುವ ‘ಕಿಡ್ನಿ ಸೀಕ್ರೆಟ್ಸ್‌ ರಿವೀಲ್ಡ್‌’ ಪುಸ್ತಕಕ್ಕೆ 2022ನೇ ಸಾಲಿನ ‘ಗೋಲ್ಡನ್‌ ಬುಕ್‌’ ಪುರಸ್ಕಾರ ಲಭಿಸಿದೆ.

‘ಸೂರಿರಾಜು ಅವರು ಮೂತ್ರಪಿಂಡಗಳ ಕುರಿತುತಮ್ಮ ಕೃತಿಯಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ಬರೆದಿದ್ದಾರೆ. ಹೀಗಾಗಿಯೇ ಭಾರತದ ಅತ್ಯುತ್ತಮ ಲೇಖಕರಿಗೆ ಕೊಡಲಾಗುವ ಪ್ರಶಸ್ತಿ ಅವರಿಗೆ ಸಂದಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಪ್ರಶಸ್ತಿಗೆ ಜಗತ್ತಿನ ವಿವಿಧ ಭಾಗಗಳಿಂದ ಒಟ್ಟು 5 ಸಾವಿರಕ್ಕೂ ಹೆಚ್ಚು ಕೃತಿಗಳು ಬಂದಿದ್ದವು. ಈ ಪೈಕಿ ಸೂರಿರಾಜು ಕೃತಿ ಸೇರಿ 35 ಪುಸ್ತಕಗಳು ಪ್ರಶಸ್ತಿಗೆ ಆಯ್ಕೆಯಾಗಿವೆ’ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.