ADVERTISEMENT

ಇಸ್ಲಾಂನಲ್ಲಿ ಸೂರ್ಯ ನಮಸ್ಕಾರ ನಿಷಿದ್ಧ: ಬೆಳಗಾಮಿ ಮುಹಮ್ಮದ್ ಸಾದ್

ಮುಸ್ಲಿಂ ಮಕ್ಕಳು ಸೂರ್ಯ ನಮಸ್ಕಾರ ಮಾಡದಿರಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 19:30 IST
Last Updated 24 ಜನವರಿ 2022, 19:30 IST
ಮುಹಮ್ಮದ್ ಸಾದ್ ಬೆಳಗಾಮಿ
ಮುಹಮ್ಮದ್ ಸಾದ್ ಬೆಳಗಾಮಿ   

ಬೆಂಗಳೂರು: ‘ಇಸ್ಲಾಂ ಧರ್ಮದಲ್ಲಿ ಸೂರ್ಯ ನಮಸ್ಕಾರ ನಿಷಿದ್ಧ.ಮುಸ್ಲಿಂ ವಿದ್ಯಾರ್ಥಿಗಳು ಗಣರಾಜ್ಯೋತ್ಸವದಂದು ನಡೆಯಲಿರುವ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು’ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಘಟಕದ ಅಧ್ಯಕ್ಷಬೆಳಗಾಮಿ ಮುಹಮ್ಮದ್ ಸಾದ್ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೂರ್ಯ ನಮಸ್ಕಾರದಂತಹ ಆರಾಧನೆಯನ್ನು ಇಸ್ಲಾಂ ಧರ್ಮದಲ್ಲಿ ನಿಷೇಧಿಸಲಾಗಿದೆ. ಮುಸ್ಲಿಂ ಪ್ರವಾದಿ ಮುಹಮ್ಮದ್ ಅವರಿಗೂ ಸಾಷ್ಟಾಂಗ ನಮಸ್ಕಾರ ಮಾಡಲು ಮುಸ್ಲಿಮರಿಗೆ ಅವಕಾಶ ಇಲ್ಲ’ಎಂದು ವಿವರಿಸಿದರು.

‘ಸೂರ್ಯಾರಾಧನೆ ತಪ್ಪಿಸುವ ಉದ್ದೇಶದಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ನಮಾಜ್‌ ಮಾಡುವುದನ್ನೂ ನಿಷೇಧಿಸಲಾಗಿದೆ. ಇಸ್ಲಾಂನಲ್ಲಿ ಈನಿರ್ಬಂಧಗಳಿರುವುದರಿಂದ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಹೇಳುವುದು ಮುಸ್ಲಿಂ ಮಕ್ಕಳ ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ’ ಎಂದು ಆರೋಪಿಸಿದರು.

ADVERTISEMENT

‘ಸರ್ಕಾರ ಒಂದು ಸಮುದಾಯದ ಧಾರ್ಮಿಕ ಆಚರಣೆಯನ್ನು ಇತರರ ಮೇಲೆ ಹೇರಬಾರದು. ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆ ಆಡಳಿತಗಳು ದೇಶದ ವೈವಿಧ್ಯ ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸಬೇಕು’ ಎಂದೂ ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.