ADVERTISEMENT

ತಬ್ಲೀಗ್‌: 57 ಮಂದಿ ವಿರುದ್ಧ ಎಫ್‌ಐಆರ್, 1,300 ಜನರ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 2:10 IST
Last Updated 9 ಏಪ್ರಿಲ್ 2020, 2:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೆಹಲಿಯ ತಬ್ಲೀಗ್ ಜಮಾತ್‌ ಸಭೆಗೆ ರಾಜ್ಯದಿಂದ 1,300ಕ್ಕೂ ಹೆಚ್ಚು ಜನ ತೆರಳಿದ್ದು, ಅವರೆಲ್ಲರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಅಲ್ಲದೆ, 57 ವಿದೇಶಿಯರನ್ನು ಕ್ವಾರಂಟೈನ್‌ ಮಾಡಿದ್ದು, ವೀಸಾನಿಯಮ ಉಲ್ಲಂಘಿಸಿದ ಕಾರಣ ಕಪ್ಪು ಪಟ್ಟಿಗೆ ಸೇರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿದೇಶಿಯರಲ್ಲಿ 20 ಮಂದಿ ಇಂಡೋನೇಷ್ಯಾ, 1 ಇಂಗ್ಲೆಂಡ್, 4 ದಕ್ಷಿಣ ಆಫ್ರಿಕಾ, 3 ಜಾಂಬಿಯಾ, 19 ಕಿರ್ಗಿಸ್ತಾನ, 1 ಅಮೆರಿಕ, 1 ಫ್ರಾನ್ಸ್‌, 1 ಕೀನ್ಯಾ ಮತ್ತು 7 ಮಂದಿ ಬಾಂಗ್ಲಾದೇಶಕ್ಕೆ ಸೇರಿದವರು. ರಾಜ್ಯದ ವಿವಿಧೆಡೆ ಇವರನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಕೋವಿಡ್‌–19 ಹಾಟ್‌ಸ್ಪಾಟ್‌ ಎಂದು ಗುರುತಿಸಲಾದ ಪ್ರದೇಶಗಳ ಬಳಿ ಇದ್ದ 276 ತಬ್ಲೀಗ್‌ ಜಮಾತ್‌ ಕಾರ್ಯಕರ್ತರನ್ನು ಬೆಂಗಳೂರಿನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಇದೇ ಹಿನ್ನೆಲೆ ಹೊಂದಿರುವ 482 ತಬ್ಲೀಗ್‌ ಜಮಾತ್‌ ಕಾರ್ಯಕರ್ತರನ್ನು ವಿವಿಧ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ 808 ತಬ್ಲೀಗ್ ಜಮಾತ್‌ ಕಾರ್ಯಕರ್ತರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.