ADVERTISEMENT

ರಾಜೀನಾಮೆ ಪತ್ರ ಪಡೆದು ಸ್ವೀಕೃತಿ ನೀಡಲು ಸಿಬ್ಬಂದಿಗೆ ತಿಳಿಸಿದ್ದೇನೆ: ಸ್ಪೀಕರ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 10:17 IST
Last Updated 6 ಜುಲೈ 2019, 10:17 IST
   

ಬೆಂಗಳೂರು:ಶಾಸಕರ ರಾಜಿನಾಮೆ ಪತ್ರಗಳನ್ನು ಪಡೆದು ಅವರಿಗೆ ಸ್ವೀಕೃತಿ ಪತ್ರ ನೀಡುವಂತೆ ನಮ್ಮ ಕಚೇರಿಯ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದು ವಿಧಾನಸಭಾ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದ್ದಾರೆ.

‘ನಾನು ನನ್ನ ಮಗಳನ್ನು ಕಾರ್ಯನಿಮಿತ್ತ ಕರೆದೊಯ್ಯಬೇಕಿತ್ತು. ಅದಕ್ಕಾಗಿಯೇ ನಾನು ಮನೆಗೆ ಹೋಗಿದ್ದೆ. ರಾಜೀನಾಮೆಯನ್ನು ಪಡೆದು ಸ್ವೀಕೃತಿ ಪತ್ರವನ್ನು ನೀಡುವಂತೆ ನನ್ನ ಕಚೇರಿ ಸಿಬ್ಬಂದಿಗೆ ತಿಳಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘11 ಶಾಸಕರು ರಾಜೀನಾಮೆ ನೀಡಿದ್ದಾರೆ. ಭಾನುವಾರ ರಜೆ ಇದ್ದು, ಸೋಮವಾರ ಕಚೇರಿಗೆ ಹೋಗಿ ನೋಡುತ್ತೇನೆ’ ಎಂದು ರಮೇಶ್‌ಕುಮಾರ್‌ ಅವರು ತಿಳಿಸಿದ್ದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

ADVERTISEMENT

ರಾಜ್ಯ ರಾಜಕೀಯದ ಕ್ಷಿಪ್ರ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 12 ಶಾಸಕರು ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರು ಶನಿವಾರ ಬೆಳಿಗ್ಗೆ ವಿಧಾನಸೌಧದಲ್ಲಿ ಸ್ಪೀಕರ್‌ ಕಚೇರಿಗೆ ತೆರಳಿದರು. ಸ್ಪೀಕರ್‌ ಕಚೇರಿಯಲ್ಲಿ ಇಲ್ಲದ ಕಾರಣ ಅವರ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ರಾಜೀನಾಮೆ ಸಲ್ಲಿಸಿ ಹೊರ ಬಂದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.