ADVERTISEMENT

ರಾಜ್ಯದಲ್ಲಿ ತಾಲಿಬಾನ್‌ ಸರ್ಕಾರವಿದೆ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 15:22 IST
Last Updated 11 ಸೆಪ್ಟೆಂಬರ್ 2025, 15:22 IST
<div class="paragraphs"><p>ಎಂ.ಪಿ.ರೇಣುಕಾಚಾರ್ಯ</p></div>

ಎಂ.ಪಿ.ರೇಣುಕಾಚಾರ್ಯ

   

ಮದ್ದೂರು (ಮಂಡ್ಯ ಜಿಲ್ಲೆ): 'ಗಣೇಶ ಮೆರವಣಿಗೆ ಮೇಲೆ ಕಲ್ಲು ಎಸೆಯುವವರು ಶಾಂತಿಧೂತರ? ಪಾಕಿಸ್ತಾನದ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಹಿಂದೂಗಳಿಗೆ ಡಿಜೆಗೆ ಅನುಮತಿ ಕೊಡುತ್ತಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿಲ್ಲ. ತಾಲಿಬಾನ್‌ ಸರ್ಕಾರವಿದೆ' ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪ ಮಾಡಿದರು.

ಮದ್ದೂರು ಘಟನೆಯಲ್ಲಿ ಗಾಯಗೊಂಡ ಚನ್ನೇಗೌಡ ಬಡಾವಣೆಯಲ್ಲಿರುವ ಮನೆಗಳಿಗೆ ಹೋಗಿ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಗ್ಗೆಯೂ ಟೀಕೆ ಮಾಡುತ್ತಾರೆ. ಕಾಂಗ್ರೆಸ್‌ಗೂ ಪಾಕಿಸ್ತಾನಕ್ಕೂ ನಂಟು ವ್ಯಾಮೋಹವಿದೆ. ‘ಭಾರತ್‌ ಮಾತಾ ಕೀ ಜೈ’ ಎಂದರೆ ಕೇಸು ಹಾಕ್ತಾರೆ. ಪಾಕಿಸ್ತಾನಕ್ಕೆ ಜೈ ಅಂದವನನ್ನು ಬ್ರದರ್‌ ಅಂತಾರೆ. ರಾಹುಲ್‌, ಸೋನಿಯಾ ಆಣತಿಯಂತೆ ಸರ್ಕಾರ ನಡೆಸುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಹುಟ್ಟಿದ ಧರ್ಮಕ್ಕೆ ಅಪಮಾನ ಮಾಡ್ತಿದ್ದಾರೆ. ಭದ್ರಾವತಿ ಶಾಸಕ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಅಂತಾರೆ. ನಿಮ್ಮ ಜೊತೆ ನಿಮ್ಮ ಬೀಗರನ್ನು ಕರೆದುಕೊಂಡು ಹೋಗಿ ಮತಾಂತರವಾಗಿ. ಇಂತಹ ಅಯೋಗ್ಯರನ್ನ ಹೆಡೆಮುರಿ ಕಟ್ಟಬೇಕು.

ಕಂಡಲ್ಲಿ ಗುಂಡಿಟ್ಟು ಹೊಡೆಯಬೇಕು. ಧರ್ಮಸ್ಥಳದ ವಿಚಾರವಾಗಿ ಅಪಮಾನ ಮಾಡಿದ್ರಿ. ಇಂತಹ ದಾಳಿಗಳ ಮುಂದವರೆದ್ರೆ ನಾವು ಸುಮ್ಮನಿರುವುದಿಲ್ಲ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.