ADVERTISEMENT

ಯುಪಿಎಸ್‌ಸಿ: ಮೊದಲ ಪ್ರಯತ್ನದಲ್ಲೇ ತಪ್ಸಿನಾ ಬಾನುಗೆ ಯಶಸ್ಸು

​ಪ್ರಜಾವಾಣಿ ವಾರ್ತೆ
Published 31 ಮೇ 2022, 20:36 IST
Last Updated 31 ಮೇ 2022, 20:36 IST
ತಪ್ಸಿನಾಬಾನು
ತಪ್ಸಿನಾಬಾನು   

ಹುಬ್ಬಳ್ಳಿ: ಹುಬ್ಬಳ್ಳಿ ಮಂಟೂರು ರಸ್ತೆಯ ನಿವಾಸಿ ತಪ್ಸಿನಾಬಾನು ದವಡಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನ
ದಲ್ಲಿಯೇ 482ನೇ ರ್‍ಯಾಂಕ್‌ನಲ್ಲಿ ತೇರ್ಗಡೆ
ಯಾಗಿದ್ದಾರೆ.

ತಪ್ಸಿನಾಬಾನು ಅವರು ನೈರುತ್ಯ ರೈಲ್ವೆಯ ನಿವೃತ್ತ ಗಾರ್ಡ್ ಖಾದರ್ ಬಾಷಾ ಹಾಗೂ ಹಸೀನಾ ಬೇಗಂ ದಂಪತಿ ಪುತ್ರಿ. ಗದಗ ರಸ್ತೆಯಲ್ಲಿರುವ ನೈರುತ್ಯ ರೈಲ್ವೆ ಬಾಲಕಿಯರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೇಶ್ವಾಪುರದ ಫಾತಿಮಾ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ವಿದ್ಯಾನಗರದ ವಿದ್ಯಾನಿಕೇತನ ಕಾಲೇಜಿನ ಪಿಯುಸಿ ವಿಜ್ಞಾನ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಅಧ್ಯಯನ ಮಾಡಿದ್ದಾರೆ.

‘ಪದವಿ ಮುಗಿದ ಬಳಿಕಜನ ಸೇವೆ ಮಾಡಬೇಕೆಂಬ ಉದ್ದೇಶದಿಂದ ತಪ್ಸಿನಾ ಮುಂಬೈ ಮತ್ತು ದೆಹಲಿಯಲ್ಲಿ ಎರಡು ವರ್ಷ ಯುಪಿಎಸ್‌ಸಿ ಪರೀಕ್ಷೆಗಾಗಿ ತರಬೇತಿ ಪಡೆದಿದ್ದರು. ಕಠಿಣ ಪರಿಶ್ರಮದಿಂದ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾಗಿರುವುದು ಹೆಮ್ಮೆಯ ಸಂಗತಿ. ಸದ್ಯ ದೆಹಲಿಯಲ್ಲಿರುವ ತಪ್ಸಿನಾ ಶುಕ್ರವಾರ ಹುಬ್ಬಳ್ಳಿಗೆ ವಾಪಸ್ಸಾಗಲಿದ್ದಾರೆ’ ಎಂದು ಅವರ ಸಂಬಂಧಿ ಮಹ್ಮದ್‌ ಇಲಿಯಾಸ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.