ಬೆಂಗಳೂರು:ಪ್ರಾಥಮಿಕ ಮತ್ತು ಪ್ರೌಢಶಾಲಾಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದುವರಿದಿದ್ದು, ಸೆ.30ರಂದು ಮತ್ತು ನಂತರದ ದಿನಗಳಲ್ಲಿ ಕೌನ್ಸೆಲಿಂಗ್‌ಗೆ ಹಾಜರಾದವರಿಗೆ ಮಾತ್ರ ಜೆಡಿಪಿಐ ಕಚೇರಿಯಲ್ಲಿಯೇ ಚಾಲನಾ ಆದೇಶ ನೀಡಲಾಗುತ್ತಿದೆ.
ಸೆ.30ಕ್ಕಿಂತ ಮೊದಲು ಕೌನ್ಸೆಲಿಂಗ್‌ಗೆ ಹಾಜರಾದವರಿಗೆ ಚಾಲನಾ ಆದೇಶವನ್ನು ಅಂಚೆ ಮೂಲಕ ಆಯಾ ಶಾಲೆಗಳ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಒಂದೆರಡು ದಿನಗಳಲ್ಲಿ ಅವುಗಳು ತಲುಪುವ ನಿರೀಕ್ಷೆ ಇದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.