ADVERTISEMENT

ವರ್ಗಾವಣೆಗೆ ಹೆದರಿ ಶಿಕ್ಷಕ ಸಾವು ‌| ಶಿಕ್ಷಕರೇ ಎದೆಗುಂದದಿರಿ: ಶಿಕ್ಷಣ ಸಚಿವ ಮನವಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 6:17 IST
Last Updated 28 ಸೆಪ್ಟೆಂಬರ್ 2019, 6:17 IST
ಸಚಿವ ಎಸ್.ಸುರೇಶ್‌ಕುಮಾರ್
ಸಚಿವ ಎಸ್.ಸುರೇಶ್‌ಕುಮಾರ್   

ಬೆಂಗಳೂರು:ವರ್ಗಾವಣೆಗೆ ಹೆದರಿ ಮೃತರಾಗಿರುವ ಹುಬ್ಬಳ್ಳಿಯ ಆನಂದನಗರದ ಸರ್ಕಾರಿ ಶಾಲಾ ಶಿಕ್ಷಕರಾದ ಸುಭಾಶ್ ತರಲಘಟ್ಟ ಅವರ ನಿಧನಕ್ಕೆ‌ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಯಾವುದೇ ಶಿಕ್ಷಕರೂ ಎದೆಗುಂದಬಾರದು. ಜವಾಬ್ದಾರಿಯುತವಾದ, ವಿವೇಕವಂತ ವ್ಯಕ್ತಿಗಳನ್ನು ರೂಪಿಸುವ ಅತ್ಯಂತ ಪವಿತ್ರವಾದದ್ದು ತಮ್ಮ ವೃತ್ತಿಯೆಂಬುದನ್ನು ಪ್ರತಿ ಶಿಕ್ಷಕರೂ ಅರಿತು ಕೆಲಸ ಮಾಡಿದಲ್ಲಿ ನಿಜಾರ್ಥದಲ್ಲಿ ಸಮಾಜ ಸೇವೆ ಸಲ್ಲಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಮುಂದಿನ ವರ್ಗಾವಣೆ ಅವಧಿಗೆ ಶಿಕ್ಷಕ‌ಸ್ನೇಹಿಯಾದ, ಸರಳವಾದ ವರ್ಗಾವಣೆ ಪ್ರಕ್ರಿಯೆಯನ್ನು ಖಂಡಿತಾ ರೂಪಿಸಲಾಗುವುದಿದ್ದು, ಈಗಾಗಲೇ ಈ ಕುರಿತು ಕರಡು ಮಸೂದೆ ರಚನೆಗೆ ಚಾಲನೆ‌ ನೀಡಲಾಗಿದೆ. ಕಡ್ಡಾಯ ವರ್ಗಾವಣೆ ಎಂಬ ಪ್ರಕ್ರಿಯೆಯನ್ನೇ ಮುಂದಿನ ಸಾಲಿಗೆ ಸ್ಥಗಿತಗೊಳಿಸಲಾಗುವುದು. ಯಾವುದೇ ಶಿಕ್ಷಕರೂ ಆತಂಕಕ್ಕೆ ಒಳಗಾಗಬಾರದೆಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.