ADVERTISEMENT

31 ಮಂದಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 20:23 IST
Last Updated 3 ಸೆಪ್ಟೆಂಬರ್ 2021, 20:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದ್ದು, 2021–22ನೇ ಸಾಲಿನಲ್ಲಿ ಒಟ್ಟು 31 ಶಿಕ್ಷಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ 20 ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಒಬ್ಬರು ವಿಶೇಷ ಶಿಕ್ಷಕ ಸೇರಿ 11 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಿಕ್ಷಕಿಯರಿಗೆ ‘ಮಾತೆ ಸಾವಿತ್ರಿಬಾಯಿ ಫುಲೆ’ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ತಲಾ ₹10 ಸಾವಿರ, ಅವರ ಶಾಲೆಗಳ ಅಭಿವೃದ್ಧಿಗೆ ಪ್ರತಿ ಶಾಲೆಗೆ ₹50 ಸಾವಿರ ನೀಡಲಾಗುತ್ತದೆ.

ಪ್ರಾಥಮಿಕ ಶಾಲಾ ಶಿಕ್ಷಕರು: ಟಿ.ಪಿ. ಉಮೇಶ– ಅಮೃತಾಪುರ, ಚಿತ್ರದುರ್ಗ, ಹೇಮಾ ಪಿ. ಅಂಗಡಿ– ಬೆಳಗಾವಿ ನಗರ. ವೈ.ಎ. ಚಂದ್ರು– ಲಿಂಗಸಗೂರು, ರಾಯಚೂರು, ಎಂ.ಪರಮೇಶ್ವರಯ್ಯ–ಮಾಲವಿ, ಬಳ್ಳಾರಿ. ಮಾರುತಿ ಭಜಂತ್ರಿ–ಚಳಮಟ್ಟಿ, ಧಾರವಾಡ. ಕೆ.ಎಸ್. ಪ್ರಕಾಶ್‌– ಹೊಸೂರು, ಶಿವಮೊಗ್ಗ. ಎಚ್.ಎ. ಶಿವಶಂಕರಯ್ಯ– ಚಿಕ್ಕನಾಯಕನಹಳ್ಳಿ, ತುಮಕೂರು. ಪಂಚಯ್ಯ ಹಿರೇಮಠ– ಹೊಸಹಳ್ಳಿ, ಗದಗ. ಸದಪ್ಪ ಏಳಗಂಟಿ– ಹೆಗ್ಗೂರ, ಬಾಗಲಕೋಟೆ. ಡಿ. ಗೋಪಾಲಸ್ವಾಮಿ– ಇಕ್ಕಡಹಳ್ಳಿ, ಚಾಮರಾಜನಗರ. ಎಸ್. ಕೃಷ್ಣಪ್ಪ–ರಾಮನಗರ. ಜಿ.ಎಸ್. ಉಂಕಿ– ಗುಡ್ಡದ ಚನ್ನಾಪುರ, ಹಾವೇರಿ. ವಿ. ಉಷಾ– ಪೆಂಡ್ಲಿವಾರಹಳ್ಳಿ– ಚಿಕ್ಕಬಳ್ಳಾಪುರ. ಬಿ.ಎ. ಜಮುನಾ– ಹೆರೋಹಳ್ಳಿ, ಬೆಂಗಳೂರು ಉತ್ತರ. ಎಡ್ವರ್ಡ್‌ ಡಿಸೋಜಾ– ಕಟ್ಟದಬೈಲು, ದಕ್ಷಿಣ ಕನ್ನಡ. ವಿ.ಜಿ. ವೆಂಕಟಾಚಲಯ್ಯ– ಗೋವಿಂದಪುರ, ಬೆಂಗಳೂರು ಗ್ರಾಮಾಂತರ. ಮಹಾದೇವ–ಮುದುಕಿ ಚಿಕ್ಕನಹುಂಡಿ, ಮೈಸೂರು. ಸ್ವಾಮಿ–ಅಲಕೆರೆ, ಮಂಡ್ಯ. ಎಚ್.ಎಂ. ಮಂಗಳ–ಕಬ್ಬಳ, ದಾವಣಗೆರೆ. ನಾರಾಯಣಪ್ಪ ಚಿತ್ರಗಾರ–ಮಾದಿನೂರು, ಕೊಪ್ಪಳ.

ADVERTISEMENT

ಪ್ರೌಢಶಾಲಾ ಶಿಕ್ಷಕರು: ಕಿಶನ್‌ ರಾವ್– ಹನುಮಸಾಗರ, ಕೊಪ್ಪಳ. ಆರ್.ಯು. ನವೀನ್‌ಕುಮಾರ್‌– ಅಲೀಪುರ, ಚಿಕ್ಕಬಳ್ಳಾಪುರ. ಜಿ. ರಂಗನಾಥ–ರೇಖಲಗೆರೆ, ಚಿತ್ರದುರ್ಗ. ಎಚ್.ಎನ್. ಶಿವಕುಮಾರ್‌– ಕಳಸ, ಚಿಕ್ಕಮಗಳೂರು. ಶಿವಲಿಂಗ– ಸಂತಪುರ, ಬೀದರ್. ಸದಾಶಿವಯ್ಯ ಎಸ್. ಪಲ್ಲೇದ– ಕುಶಾಲನಗರ, ಕೊಡಗು. ಶ್ರೀಕಾಂತ ರಾಮ ಪಟಗಾರ– ಕೋಣಂದೂರು, ಶಿವಮೊಗ್ಗ. ಎಂ.ಎಸ್. ನಟರಾಜು– ಹೆಗ್ಗೆರೆ, ತುಮಕೂರು. ಸಪನಾ ಅನಿಗೋಳ–ಮಹಾಲಿಂಗಪುರ, ಬಾಗಲಕೋಟೆ. ಬಸವರಾಜ ಅವಟಿ–ಪೀರಾಪುರ, ವಿಜಯಪುರ. ಕೆ. ಸಂಗೀತಾ– ಜಿ.ಬಿ. ಸರಗೂರು, ಹೆಗ್ಗಡದೇವನ ಕೋಟೆ, ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.