ADVERTISEMENT

ಬಜ್ಪೆಯಲ್ಲಿ ದಿನದ ಗರಿಷ್ಠ ತಾಪಮಾನ ದಾಖಲು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:33 IST
Last Updated 17 ಡಿಸೆಂಬರ್ 2019, 19:33 IST

ಮಂಗಳೂರು: ದೇಶದಲ್ಲೇ ದಿನದ ಗರಿಷ್ಠ ತಾಪಮಾನವು ಸೋಮವಾರ ಮಂಗಳೂರಿನ ಬಜ್ಪೆಯಲ್ಲಿ 34.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ದೇಶದ ಇತರೆಡೆಗಿಂತ ಗರಿಷ್ಠ ತಾಪಮಾನವು ದಾಖಲಾಗುತ್ತಿದ್ದು, ವಾಡಿಕೆಗಿಂತ 1.6 ಡಿ.ಸೆ. ನಿಂದ 3.0 ಡಿ.ಸೆ. ತಾಪಮಾನ ಹೆಚ್ಚಳವಿದೆ.

ಮಂಗಳೂರಿನ ಡಿಸೆಂಬರ್‌ ತಿಂಗಳ ಸರಾಸರಿ ತಾಪಮಾನವು ಗರಿಷ್ಠ 33.1 ಡಿ.ಸೆ. ಹಾಗೂ ಕನಿಷ್ಠ 21.4 ಡಿ.ಸೆ. ಇವೆ. 2012ರ ಡಿಸೆಂಬರ್ 21ರಂದು ದಾಖಲಾದ 36.9 ಡಿಗ್ರಿ ಸೆಲ್ಸಿಯಸ್‌ ಮಂಗಳೂರಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಈ ತನಕ ದಾಖಲಾದ ಗರಿಷ್ಠ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ADVERTISEMENT

‘ಮೋಡ ಕವಿದ ಆಕಾಶದ ಪರಿಣಾಮ ಕರಾವಳಿಯಲ್ಲಿ ಚಳಿ ಏರಿಕೆಯಾಗದೇ, ತಾಪಮಾನವು ಹೆಚ್ಚಾಗಿದೆ. ವಾಯಭಾರದ (ಟರ್ಫ್)ದಲ್ಲಿನ ಒತ್ತಡದಲ್ಲಿ ಅಲ್ಪ ಕುಸಿತದ ಕಾರಣ ಮೋಡಗಳು ಕವಿಯುತ್ತಿವೆ. ಇದು ಶೀಘ್ರವೇ ತಿಳಿಯಾಗಲಿದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಸೋಮವಾರ ದಿನದ ಕನಿಷ್ಠ ತಾಪಮಾನವು ರಾಜಸ್ತಾನದ ಬಿಲ್ವಾರದಲ್ಲಿ 4.4 ಡಿ.ಸೆ. ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.