ADVERTISEMENT

ಸೀರೆಯಲ್ಲಿ ಅರಳಿತು ರೈತನ 'ಕೃಷಿ ಬದುಕು'

ಸಂಕ್ರಾಂತಿ ಕೊಡುಗೆ; ಮೊಳಕಾಲ್ಮುರು ರೇಷ್ಮೆಸೀರೆಯಲ್ಲಿ ನೇಕಾರನ ಕೈಚಳಕ

ಕೊಂಡ್ಲಹಳ್ಳಿ ಜಯಪ್ರಕಾಶ
Published 14 ಜನವರಿ 2021, 3:23 IST
Last Updated 14 ಜನವರಿ 2021, 3:23 IST
ಮೊಳಕಾಲ್ಮುರು ಸೀರೆಯಲ್ಲಿ ಅರಳಿದ ರೈತನ ಬದುಕಿನ ಚಿತ್ರಣ
ಮೊಳಕಾಲ್ಮುರು ಸೀರೆಯಲ್ಲಿ ಅರಳಿದ ರೈತನ ಬದುಕಿನ ಚಿತ್ರಣ   

ಮೊಳಕಾಲ್ಮುರು: ಇತ್ತೀಚಿನ ದಿನಗಳಲ್ಲಿ ರೇಷ್ಮೆ ಸೀರೆಯಲ್ಲಿ ವಿಭಿನ್ನ ರೀತಿ ನೇಯ್ಗೆ ಪ್ರಯತ್ನಗಳನ್ನು ಮಾಡುತ್ತಿರುವ ಸ್ಥಳೀಯ ನೇಕಾರರು ಈ ಸಂಕ್ರಾಂತಿಗೆ ರೇಷ್ಮೆ ಸೇರೆಯಲ್ಲಿ ರೈತ ಮತ್ತು ಗ್ರಾಮೀಣ ಬದುಕು ಕಟ್ಟಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.

ಪಟ್ಟಣದ ನಿವಾಸಿ ಅಮೃತ್ ಸ್ಯಾರಿ ಸೆಂಟರ್‌ನ ಡಿ.ಎಸ್. ಮಲ್ಲಿಕಾರ್ಜುನ ಈ ಕೈಚಳಕ ಮಾಡಿರುವ ನೇಕಾರ.

ದೇಶಕ್ಕೆ ಅನ್ನ ನೀಡುತ್ತಿರುವ ರೈತರ ನೆನಪಿನಲ್ಲಿ ಯಾವುದಾದರೂ ಒಂದು ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಕೈ ಹಾಕಿದೆ. ರೈತರ ಹಬ್ಬವೆಂದು ಖ್ಯಾತಿ ಪಡೆದಿರುವ ಸಂಕ್ರಾಂತಿಗೆ ಈ ಕೊಡುಗೆಯನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಕೃಷಿ ಚಟುವಟಿಕೆ ಹಾಗೂ ಗ್ರಾಮೀಣ ಜನ ಜೀವನದ ಚಿತ್ರಣವನ್ನು ನೇಯ್ಗೆಯಲ್ಲಿ ಮೂಡಿಸಲಾಗಿದೆ ಎಂದು ಮಲ್ಲಿಕಾರ್ಜುನ್ ತಿಳಿಸಿದರು.

ADVERTISEMENT

480 ಜಕಾರ್ಡ್ ಸೀರೆಯಲ್ಲಿ 2000 ಕಾರ್ಡ್ ಹಾಗೂ 900 ಬೋರ್ಡ್‌ಗಳನ್ನು ಬಳಸಿ ಮನೆ ಬಾರ್ಡರ್ ಸೀರೆಯನ್ನು ನೇಯ್ಗೆ ಮಾಡಲಾಗಿದೆ. ಉತ್ಕೃಷ್ಟ ಜರಿ ಮತ್ತು ರೇಷ್ಮೆಯನ್ನು ಬಳಸಲಾಗಿದೆ. ₹ 50 ಸಾವಿರ ವೆಚ್ಚ ತಗುಲಿದೆ.

ಸೀರೆ ಅಂಚಿನಲ್ಲಿ ರೈತ ತನ್ನ ಮಗನೊಂದಿಗೆ ಹೊಲದಲ್ಲಿ ಬೆಳೆದಿರುವ ಧಾನ್ಯಗಳನ್ನು ಮೂಟೆಯಲ್ಲಿ ಹೇರಿಕೊಂಡು ಬರುತ್ತಿದ್ದಾನೆ. ಎದುರಿನಲ್ಲಿ ಹೆಂಡತಿ, ಮಗಳು ಅವರನ್ನು ಆರತಿ ಎತ್ತಿ ಬರ ಮಾಡಿಕೊಳ್ಳುವ ದೃಶ್ಯವಿದೆ. ಬಾವಿಸುತ್ತಲಿನಲ್ಲಿ ಬಾವಿಯಿಂದ ನೀರನ್ನು ಸೇದುತ್ತಿರುವ ಚಿತ್ರಣ. ಜಿಂಕೆ, ಕೋಳಿ, ಮೇಕೆ ಇನ್ನಿತರೆ ಪ್ರಾಣಿ, ಪಕ್ಷಿಗಳನ್ನು ಕಾಣಬಹುದಾಗಿದೆ.

‘15 ದಿನಗಳ ಕಾಲ ಇಬ್ಬರು ಶ್ರಮವಹಿಸಿ ಈ ಸೀರೆ ನೇಯ್ಗೆ ಮಾಡಿದ್ದಾರೆ. ಸೀರೆ ಡಿಸೈನ್ ಅನ್ನು ನಾವು ಇಟ್ಟುಕೊಂಡಿದ್ದು
ಯಾರಾದರೂ ಈ ಡಿಸೈನ್ ಬೇಕುಎಂದು ಅಪೇಕ್ಷೆ ಪಟ್ಟಲ್ಲಿ ನೇಯ್ಗೆ ಮಾಡಿಸಿ ಕೊಡುತ್ತೇವೆ’ ಎಂದರು. ಡಿ.ಎಸ್. ಮಲ್ಲಿಕಾರ್ಜುನ ಅವರ ಸಂಪರ್ಕಕ್ಕೆ: 9900777162.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.