ADVERTISEMENT

ಯೋಜನಾ ಆಯೋಗದ ಹೆಸರು ಬದಲಿಸಿದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 21:00 IST
Last Updated 6 ಆಗಸ್ಟ್ 2022, 21:00 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸ್ವರೂಪವನ್ನು ಬದಲಿಸಿರುವ ರಾಜ್ಯ ಸರ್ಕಾರ, ಅದನ್ನು ಕೇಂದ್ರದ ನೀತಿ ಆಯೋಗದ ಮಾದರಿಯಲ್ಲಿ ‘ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ’ (ಎಸ್‌ಐಟಿಕೆ) ಎಂದು ಬದಲಿಸಿ ಆದೇಶ ಹೊರಡಿಸಿದೆ.ಸಂಸ್ಥೆಯ ಕಾರ್ಯಚಟುವಟಿಕೆಗೆ ವಾರ್ಷಿಕ ₹ 150 ಕೋಟಿ ಹಂಚಿಕೆ ಮಾಡಲು ಕೂಡಾ ತೀರ್ಮಾನಿ ಸಲಾಗಿದೆ.‌

ಈ ಸಂಸ್ಥೆಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರನ್ನು ಸರ್ಕಾರ ನಾಮನಿರ್ದೇಶನ ಮಾಡಲಿದೆ. ಯೋಜನೆ, ಆರ್ಥಿಕ, ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ನಗರಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ವಿಶೇಷ ಆಹ್ವಾನಿತರಾಗಿರುತ್ತಾರೆ.

ನೀತಿ ಆಯೋಗದ ಮಾದರಿಯಲ್ಲಿ, ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು 2047ರ(ಮುಂದಿನ 25 ವರ್ಷ) ಗುರಿಯನ್ನು ಕೇಂದ್ರೀಕರಿಸಲು ಶಿಕ್ಷಣ, ಆರೋಗ್ಯ ಮತ್ತು ಪೋಷಣೆ, ಕೃಷಿ ಮತ್ತು ಕೈಗಾರಿಕೆ, ಗ್ರಾಮೀಣ ಮತ್ತು ನಗರಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ, ಶುದ್ಧ ಮತ್ತು ಹಸಿರು ಇಂಧನ, ಆರ್ಥಿಕತೆ ಮತ್ತು ಹಣಕಾಸು ಹೀಗೆ ಎಂಟು ವಲಯಗಳಿಂದ ಪರಿಣತರನ್ನು ಸಲಹೆಗಾರನ್ನಾಗಿ ನೇಮಿಸಲಾಗುವುದು. ಅಲ್ಲದೆ, 10 ತಾಂತ್ರಿಕ ವಿಭಾಗಗಳನ್ನು ರಚಿಸಲು ಕೂಡಾ ಉದ್ದೇಶಿಸಲಾಗಿದೆ.

ADVERTISEMENT

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲಿದ್ದಾರೆ. ಅಲ್ಲದೆ, ಬಡತನ ನಿರ್ಮೂಲನೆ, ಆದಾಯ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ, ಸೇವೆಗಳ ಸರಳೀಕರಣ, ಸ್ವಚ್ಛ ಮತ್ತು ಹಸಿರು ಇಂಧನ, ಸಂಪನ್ಮೂಲಗಳ ನಿರ್ವಹಣೆ, ಲಿಂಗ ಸಮಾನತೆ, ಕೈಗಾರಿಕೆ ಮತ್ತು ಮೂಲಸೌಕರ್ಯ ನಾವೀನ್ಯತೆ ಮತ್ತು ಕೌಶಲಾಭಿವೃದ್ಧಿಯಂಥ ಎಂಟು ವಿಷಯಗಳಿಗೆ ಸಂಬಂಧಿಸಿದಂತೆ ಅವರಿಗೆ ಸಲಹೆಗಾರನ್ನು ತಜ್ಞರನ್ನು ನೇಮಿಸಲಾಗುವುದು.

ಕರ್ನಾಟಕ ಆವಿಷ್ಕಾರ ಪ್ರಾಧಿಕಾರ, ಜ್ಞಾನ ಆಯೋಗ, ಐಐಎಸ್‌ಸಿ, ಐಐಎಂಬಿ, ಎನ್‌ಎಲ್‌ಎಸ್‌ಐಯು, ಐಸೆಕ್‌ ಸೇರಿದಂತೆ ಸುಮಾರು 14 ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ‘ಪಾಲುದಾರ ಸಂಸ್ಥೆ’ಗಳಾಗಿ ಮಾಡಲು ತೀರ್ಮಾನಿ
ಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.