ADVERTISEMENT

ಬೆಳಗಾವಿ | ಪಿಪಿಇ ಕಿಟ್ ಧರಿಸದೆ ಕೋವಿಡ್–19 ಸೋಂಕಿತನ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 15:33 IST
Last Updated 3 ಜುಲೈ 2020, 15:33 IST
ಅಥಣಿಯಲ್ಲಿ ಕೋವಿಡ್–19 ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಅಂತ್ಯಸಂಸ್ಕಾರದ ವೇಳೆ ಸಂಬಂಧಿಕರು ಮುಂಜಾಗ್ರತಾ ಕ್ರಮವಾಗಿ ಪಿಪಿಇ ಕಿಟ್ ಧರಿಸಿಲ್ಲದಿರುವುದು
ಅಥಣಿಯಲ್ಲಿ ಕೋವಿಡ್–19 ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಅಂತ್ಯಸಂಸ್ಕಾರದ ವೇಳೆ ಸಂಬಂಧಿಕರು ಮುಂಜಾಗ್ರತಾ ಕ್ರಮವಾಗಿ ಪಿಪಿಇ ಕಿಟ್ ಧರಿಸಿಲ್ಲದಿರುವುದು   

ಅಥಣಿ (ಬೆಳಗಾವಿ): ಇಲ್ಲಿ ಬುಧವಾರ ಕೋವಿಡ್–19ನಿಂದ ಮೃತರಾದ ವ್ಯಕ್ತಿಯ ಶವದ ಅಂತ್ಯಸಂಸ್ಕಾರ ನಡೆಸುವಾಗ ಸಂಬಂಧಿಕರು ಪಿಪಿಇ ಕಿಟ್‌ ಧರಿಸದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆರೋಗ್ಯ ಇಲಾಖೆಯ ಇಬ್ಬರು ಮಾತ್ರವೇ ಪಿಪಿಇ ಕಿಟ್‌ ಹಾಕಿರುವುದು ವಿಡಿಯೊದಲ್ಲಿದೆ. ಅವರು ಶವವನ್ನು ರಗ್ಗಿನಲ್ಲಿಟ್ಟುಕೊಂಡು ತಂದ ನಂತರ, ಪಿಪಿಇ ಕಿಟ್‌ ಧರಿಸಿಲ್ಲದ ನಾಲ್ವರು ಸಹಾಯ ಮಾಡಿದ್ದಾರೆ. ಅವರು ಮಾಸ್ಕ್‌ ಮಾತ್ರವೇ ಹಾಕಿರುವುದು 5.10 ನಿಮಿಷದ ವಿಡಿಯೊದಲ್ಲಿದೆ.

ಗುಂಡಿಗೆ ಪ್ಲಾಸ್ಟಿಕ್‌ ಹಾಕಿ ನಂತರ ಅದನ್ನು ಶವಕ್ಕೆ ಹೊದಿಸಿ ಅಂತ್ಯಸಂಸ್ಕಾರ ನೆರವೇರಿಸುವುದು ವಿಡಿಯೊದಲ್ಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.