ADVERTISEMENT

ಪಿಎಫ್‌: ಜನ್ಮದಿನಾಂಕ ಪುರಾವೆಗೆ ‘ಆಧಾರ್’

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 19:47 IST
Last Updated 5 ಏಪ್ರಿಲ್ 2020, 19:47 IST
ಆಧಾರ್ ಕಾರ್ಡ್
ಆಧಾರ್ ಕಾರ್ಡ್   

ಬೆಂಗಳೂರು: ಕಾರ್ಮಿಕರು ತಮ್ಮ ಖಾತೆಯಲ್ಲಿನ ಭವಿಷ್ಯ ನಿಧಿ (ಪಿಎಫ್‌) ಹಣವನ್ನು ಪಡೆಯಲು ಜನ್ಮದಿನಾಂಕದ ಪುರಾವೆಯಾಗಿ ಆಧಾರ್‌ ಗುರುತಿನ ಚೀಟಿ ನೀಡಬಹುದು ಎಂದು ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್‌ಒ) ಹೇಳಿದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ತಮ್ಮ ಭವಿಷ್ಯ ನಿಧಿಯಲ್ಲಿ ಶೇ 75ರಷ್ಟು ಹಣವನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆನ್‌ಲೈನ್‌ನಲ್ಲಿಯೇ ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಆದರೆ, ಜನ್ಮದಿನಾಂಕದಲ್ಲಿನ ವ್ಯತ್ಯಾಸದಿಂದ ಈ ಕಾರ್ಯ ವಿಳಂಬವಾಗುತ್ತಿದ್ದು, ಇಪಿಎಫ್‌ಒ ಸದಸ್ಯರ ಮನವಿ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.

ಭವಿಷ್ಯನಿಧಿ ಖಾತೆ ಹಾಗೂ ಆಧಾರ್‌ ಗುರುತಿನ ಚೀಟಿಯಲ್ಲಿನ ಜನ್ಮದಿನಾಂಕ ಮೂರು ವರ್ಷಗಳಿಗಿಂತ ಕಡಿಮೆ ಅಂತರವನ್ನು ಹೊಂದಿದ್ದರೆ, ಆಧಾರ್ ಗುರುತಿನ ಚೀಟಿಯಲ್ಲಿನ ಜನ್ಮದಿನಾಂಕವನ್ನೇ ಅಧಿಕೃತ ಎಂದು ಪರಿಗಣಿಸಬೇಕು ಎಂದು
ಇಪಿಎಫ್‌ಒ ಪ್ರಾದೇಶಿಕ ಕಚೇರಿಗಳಿಗೆ ಸೂಚನೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.