ADVERTISEMENT

ಮಲೆ ಮಹದೇಶ್ವರ ವನ್ಯ ಧಾಮದಲ್ಲಿ ಹುಲಿ ಹತ್ಯೆ ಪ್ರಕರಣ: ಒಬ್ಬ ಆರೋಪಿ ಶರಣು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 0:15 IST
Last Updated 9 ಅಕ್ಟೋಬರ್ 2025, 0:15 IST
<div class="paragraphs"><p> ಹುಲಿ</p></div>

ಹುಲಿ

   

ಹನೂರು: ಮಲೆ ಮಹದೇಶ್ವರ ವನ್ಯ ಧಾಮದಲ್ಲಿ ಈಚೆಗೆ ಹುಲಿ ಹತ್ಯೆ ಪ್ರಕರಣ ದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದರಾಜು ಬುಧವಾರ ಶರಣಾಗಿದ್ದಾನೆ.

ನಾಪತ್ತೆಯಾಗಿದ್ದ ಆರೋಪಿಯನ್ನು ಕುಟುಂಬಸ್ಥರೇ ತಂದೊಪ್ಪಿಸಿದ್ದಾರೆ ಎಂದು  ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಹನೂರು ಬಫರ್ ವಲಯದ ಆನೆ ಕಾರ್ಯ ಪಡೆಯ ಹೊರಗುತ್ತಿಗೆ ನೌಕರ ಸೆ.30ರಂದು ಪಚ್ಚಿದೊಡ್ಡಿ ಗಸ್ತಿನಲ್ಲಿ ಹುಲಿ ಸತ್ತಿರುವುದನ್ನು ಗಮನಿಸಿದರೂ ಇಲಾಖೆಗೆ ಮಾಹಿತಿ ನೀಡದೆ ಹುಲಿ ಹತ್ಯೆಗೈದ ಆರೋಪಿಗೆ ಮಾಹಿತಿ ನೀಡಿ, ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಸಹಾಯ ನೀಡಿರುವ ಆರೋಪ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.