ಬೆಂಗಳೂರು: ಬೆಳೆಹಾನಿ, ಮಳೆ ಮತ್ತು ಪ್ರವಾಹದಿಂದ ಮನೆಗಳು ಹಾನಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎ, ಬಿ ಮತ್ತು ಸಿ ವರ್ಗದ ವರ್ಗವಾರು ವಿವರಗಳನ್ನು ರಾಜೀವ್‌ಗಾಂಧಿ ವಸತಿ ನಿಗಮ ನಿಯಮಿತದ ತಂತ್ರಾಂಶಕ್ಕೆ ನಮೂದಿಸುವ ಅವಧಿಯನ್ನು ಇದೇ 7ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ನ. 30 ಕೊನೆಯ ದಿನವಾಗಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಅವಧಿ ವಿಸ್ತರಿಸಲಾಗಿದೆ. ಅಲ್ಲದೆ, ಬೆಳೆ ಹಾನಿಯ ವಿವರಗಳನ್ನೂ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಕಂದಾಯ ಇಲಾಖೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.