ADVERTISEMENT

18 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 15:49 IST
Last Updated 18 ಫೆಬ್ರುವರಿ 2026, 15:49 IST
   

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Ranji| 67 ವರ್ಷಗಳಲ್ಲಿ ಇದೇ ಮೊದಲು; ದಾಖಲೆ ಬರೆದ ಜಮ್ಮು ಮತ್ತು ಕಾಶ್ಮೀರ

ಕಲ್ಯಾಣಿ, ಬಂಗಾಳ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್ ತಂಡವು ಇದೇ ಮೊದಲ ಬಾರಿ ರಣಜಿ ಟ್ರೋಫಿ ಟೂರ್ನಿಯ ಫೈನಲ್ ತಲುಪುವ ಮೂಲಕ ಇತಿಹಾಸ ರಚಿಸಿತು. ತಂಡದ 67 ವರ್ಷಗಳ ಇತಿಹಾಸದಲ್ಲಿ ಪ್ರಥಮ ಸಲ ಈ ಸಾಧನೆ ಮೂಡಿಬಂದಿದೆ.  

ಇ.ಡಿ ಶೋಧದ ವೇಳೆ ಮಮತಾ ಹಸ್ತಕ್ಷೇಪ: ವಿಚಾರಣೆ ಮಾ.18ಕ್ಕೆ ಮುಂದೂಡಿಕೆ

ನವದೆಹಲಿ : ‘ಐ–ಪ್ಯಾಕ್‌’ ಕಚೇರಿಯಲ್ಲಿ ಜನವರಿ 8ರಂದು ಶೋಧ ನಡೆಸುವ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಮಾಡಿದ್ದರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮಾರ್ಚ್‌ 18ಕ್ಕೆ ಮುಂದೂಡಿದೆ. 

ADVERTISEMENT

ಸ್ತನ ಮುಟ್ಟುವುದು ‘ಅತ್ಯಾಚಾರ ಯತ್ನ’ಅಲ್ಲ ಎಂದಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ವಜಾ

ನವದೆಹಲಿ ಸಂತ್ರಸ್ತೆಯ ಸ್ತನಗಳನ್ನು ಮುಟ್ಟುವುದು ಮತ್ತು ಪೈಜಾಮಾದ ದಾರವನ್ನು ಎಳೆಯುವುದು ಕೂಡ ‘ಅತ್ಯಾಚಾರ ಯತ್ನ’ಕ್ಕೆ ಸಮಾನವಾದ ಕೃತ್ಯ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ರೌಡಿ ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿ ವಿಚಾರಣೆ ತೀವ್ರ

ಬೆಂಗಳೂರು: ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಸಿಐಡಿ ಪೊಲೀಸರ ಕಸ್ಟಡಿಯಲ್ಲಿರುವ ಐದನೇ ಆರೋಪಿ, ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ರಣಜಿ ಟ್ರೋಫಿ ಸೆಮಿಫೈನಲ್: ಸ್ಮರಣ್ ಶತಕ, ಕರ್ನಾಟಕ ಭಾರಿ ಮುನ್ನಡೆ

ಲಖನೌ: ರವಿಚಂದ್ರನ್ ಸ್ಮರಣ್ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಶತಕ ಗಳಿಸಿದರು. ಇದರಿಂದಾಗಿ ಕರ್ನಾಟಕ ತಂಡವು ಉತ್ತರಾಖಂಡ ಎದುರು ಒಟ್ಟು 802 ರನ್‌ಗಳ ಮುನ್ನಡೆ ಸಾಧಿಸಿದೆ. 

T20 ವಿಶ್ವಕಪ್ ಆರಂಭಕ್ಕೂ ಮೊದಲು ಹೀರೊ, ಈಗ ಆತನೇ ವಿಲನ್: ಅಭಿಷೇಕ್ ಅನಗತ್ಯ ದಾಖಲೆ

ಅಹಮದಾಬಾದ್: ಇಲ್ಲಿನ ನರೇಂಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ನೆದರ್‌ಲ್ಯಾಂಡ್ ತಂಡಗಳ ನಡುವೆ ಸಿ ಗುಂಪಿನ ಕೊನೆಯ ಲೀಗ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಭೂಕಬಳಿಕೆ: ಬಿಜೆಪಿ ಆರೋಪ

ನವದೆಹಲಿ: 'ಕರ್ನಾಟಕದಲ್ಲಿ ಕಾಂಗ್ರೆಸ್‌ ಭೂಕಬಳಿಕೆ ಮತ್ತು ಭ್ರಷ್ಟಾಚಾರ ನಡೆಸುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ.

ನಾನು ರಾಹುಲ್‌ವಾದಿಯಲ್ಲ: ಮಣಿಶಂಕರ್ ಅಯ್ಯರ್

ನವದೆಹಲಿ: ‘ನಾನು ‘ಗಾಂಧಿವಾದಿ’, ‘ನೆಹರೂವಾದಿ’ ಮತ್ತು ‘ರಾಜೀವ್‌ವಾದಿ’, ಆದರೆ ‘ರಾಹುಲ್‌ವಾದಿ’ ಅಲ್ಲ. ಏಕೆಂದರೆ ರಾಹುಲ್‌ ನನಗಿಂತ ತುಂಬಾ ಕಿರಿಯರು. ರಾಜಕೀಯ ಜೀವನದಲ್ಲಿ ನನ್ನಿಂದ ಬಹಳ ದೂರದಲ್ಲಿದ್ದಾರೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಬುಧವಾರ ಹೇಳಿದರು.

ಬಾಂಗ್ಲಾದೇಶ ಸಚಿವ ಸಂಪುಟದ ಏಕೈಕ ಹಿಂದೂ ಸಚಿವ ಇವರೇ..

ಫೆಬ್ರುವರಿ 12ರಂದು ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯೂ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿತು. ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷವು(ಬಿಎನ್‌ಪಿ) ಅಧಿಕಾರಕ್ಕೆ ಬಂದು ಪಕ್ಷದ ಅಧ್ಯಕ್ಷ ತಾರಿಖ್ ರೆಹಮಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ಫೇಕ್ ಇನ್ ಇಂಡಿಯಾ: ರೊಬೊ ನಾಯಿ ವಿವಾದದ ಬಗ್ಗೆ ಸಿದ್ದರಾಮಯ್ಯ ಕಿಡಿ

ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ರೋಬೊಡಾಗ್ ವಿವಾದದ ಮಧ್ಯೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದ್ದಾರೆ. 'ಕಾಪಿ-ಪೇಸ್ಟ್' ಎಂದು ಜರಿದಿದ್ದಾರೆ.