ADVERTISEMENT

ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಚಾರ ದಟ್ಟಣೆ: ಮನೆ ತಲುಪಲು ಪರದಾಡಿದ ಶಾಲಾ ಮಕ್ಕಳು

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 16:17 IST
Last Updated 4 ಜೂನ್ 2025, 16:17 IST
   

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಕಾರಣ ಸಂಚಾರ ದಟ್ಟಣೆ ಉಂಟಾಯಿತು. ಶಾಲಾ ವಾಹನಗಳ ಚಾಲಕರು ನಿಗದಿತ ಸಮಯಕ್ಕೆ ಮಕ್ಕಳನ್ನು ಮನೆಗೆ ತಲುಪಿಸಲು, ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗಲು ಪರದಾಡಿದರು.  

ಸಂಚಾರ ದಟ್ಟಣೆ ಪರಿಗಣಿಸಿ, ನಗರದ ಹಲವು ಶಾಲೆಗಳು ಮಧ್ಯಾಹ್ನದ ಬಳಿಕ ರಜೆ ಘೋಷಿಸಿ, ಮಕ್ಕಳನ್ನು ಬೇಗನೆ ಮನೆಗೆ ಕಳುಹಿಸಿದರೂ, ವಾಹನಗಳು ರಸ್ತೆಯಲ್ಲಿ ಸಾಗಲು ಪ್ರಯಾಸ ಪಡಬೇಕಾಯಿತು.

ಬಿಷಪ್‌ ಕಾಟನ್‌ ಗ್ರೂಪ್‌ ಶಾಲೆಗಳು, ಸೇಂಟ್‌ ಜೋಸೆಫ್‌ ಶಾಲೆ ಮತ್ತು ಕಾಲೇಜು, ಸೋಫಿಯಾ ಪ್ರೌಢಶಾಲೆ ಮತ್ತು ಕ್ಯಾಥೆಡ್ರಲ್‌ ಶಾಲೆ ಸೇರಿದಂತೆ ಹಲವು ಶಾಲಾ ಆಡಳಿತ ಮಂಡಳಿಗಳು ಮಧ್ಯಾಹ್ನದ ವೇಳೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಪೋಷಕರಿಗೆ ಸಂದೇಶಗಳನ್ನು ಕಳುಹಿಸಿದ್ದವು. ಕೆಲವೆಡೆ ಪೊಲೀಸರೇ ಶಾಲೆಗಳನ್ನು ಬೇಗನೆ ಬಂದ್‌ ಮಾಡುವಂತೆ ಸೂಚನೆ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.