ADVERTISEMENT

ಶ್ರಮಿಕರಿಗಾಗಿ ಬೆಳಗಾವಿಯಿಂದ ಗೋರಖ್‌ಪುರಕ್ಕೆ ರೈಲು ನಾಳೆ

​ಪ್ರಜಾವಾಣಿ ವಾರ್ತೆ
Published 29 ಮೇ 2020, 14:41 IST
Last Updated 29 ಮೇ 2020, 14:41 IST
   

ಬೆಳಗಾವಿ: ‘ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಬೆಳಗಾವಿ–ಗೋರಖ್‌ಪುರ ಶ್ರಮಿಕ್‌ ವಿಶೇಷ ರೈಲು ನಗರದ ಕೇಂದ್ರ ರೈಲು ನಿಲ್ದಾಣದಿಂದ ಮೇ 30ರಂದು ಸಂಜೆ 7ರಕ್ಕೆ ಹೊರಡಲಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.

‘ಈ ರೈಲು ಜೂನ್ 1ರಂದು ಬೆಳಿಗ್ಗೆ 9ಕ್ಕೆ ಗೋರಖ್‌ಪುರ ತಲುಪಲಿದೆ. ಅಂದು ಸಂಜೆ 5ಕ್ಕೆ ಅಲ್ಲಿಂದ ಹೊರಟು, ಜೂನ್‌ 3ರಂದು ಬೆಳಿಗ್ಗೆ 8ಕ್ಕೆ ಬೆಳಗಾವಿ ತಲುಪಲಿದೆ. ಮಾರ್ಗಸೂಚಿಗಳ ಪ್ರಕಾರ ಈ ರೈಲು ಸಂಚರಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT