ADVERTISEMENT

ಮುಷ್ಕರ‌ ಸ್ಥಗಿತಕ್ಕೆ ಸಾರಿಗೆ ನೌಕರರ ಹಿಂದೇಟು: ಮನವೊಲಿಕೆಗೆ ಹರಸಾಹಸ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 9:57 IST
Last Updated 14 ಡಿಸೆಂಬರ್ 2020, 9:57 IST
   

ಬೆಂಗಳೂರು: ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್, ಮುಷ್ಕರ‌ ಸ್ಥಗಿತಕ್ಕೆ ನೌಕರರ ಮನವೊಲಿಕೆ ಆರಂಭಿಸಿದ್ದಾರೆ. ಆದರೆ, ಸಚಿವರೇ ಸ್ಥಳಕ್ಕೆ ಬಂದು ಭರವಸೆ ನೀಡಬೇಕು ಎಂದು ನೌಕರರು ಪಟ್ಟು ಹಿಡಿದಿದ್ದಾರೆ.

ಆರನೇ ವೇತನ ಆಯೋಗದ ಶಿಫಾರಸು ಜಾರಿ ಕುರಿತು ಕೋಡಿಹಳ್ಳಿ ಚಂದ್ರಶೇಖರ್ ಅವರು ಲಕ್ಷ್ಮಣ ಸವದಿ ಅವರೊಂದಿಗೆ 20 ನಿಮಿಷಗಳ ಕಾಲ ದೂರವಾಣಿ ಮೂಲಕ‌ ಮಾತುಕತೆ ನಡೆಸಿದರು. ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಪೂರ್ಣ ಪ್ರಯತ್ನ ನಡೆಸುವುದಾಗಿ ಸವದಿ ಭರವಸೆ ನೀಡಿದ್ದಾರೆ ಎಂದು ಕೋಡಿಹಳ್ಳಿ ಸಭೆಗೆ ತಿಳಿಸಿದರು.

'ನಮ್ಮ ಹೋರಾಟಕ್ಕೆ ಪ್ರತಿಫಲ ದೊರಕಿದೆ' ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಮುಷ್ಕರ ನಿರತರ ಮನವೊಲಿಕೆಗೆ ಯತ್ನಿಸಿದರು. ಅವರ ವಿರುದ್ಧ ಹರಿಹಾಯ್ದ ನೌಕರರು, ಮಾತನಾಡಲು ಬಿಡಲಿಲ್ಲ.‌ ಸಚಿವರೇ ಸ್ಥಳಕ್ಕೆ ಬಂದು ಭರವಸೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.