ಬೆಂಗಳೂರು: ಕೆಎಸ್ಆರ್ಟಿಸಿ ಬಸ್ಗಳಲ್ಲಿ ಆಗಸ್ಟ್ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 3208 ಪ್ರಯಾಣಿಕರಿಂದ ₹ 4.70 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ಕೆಎಸ್ಆರ್ಟಿಸಿ ತನಿಖಾ ತಂಡದಲ್ಲಿನ ಅಧಿಕಾರಿಗಳು ಆಗಸ್ಟ್ನಲ್ಲಿ 44,416 ಬಸ್ಗಳಲ್ಲಿ ತನಿಖೆ ನಡೆಸಿದ್ದರು. ನಿಗಮದ ಆದಾಯದಲ್ಲಿ ₹ 69,336 ಸೋರಿಕೆ ಪತ್ತೆಯಾಗಿತ್ತು. ಅದನ್ನು ದಂಡ ಸಹಿತ ವಸೂಲಿ ಮಾಡಲಾಗಿದೆ. ಪ್ರಯಾಣಿಕರು ಟಿಕೆಟ್ ಇಲ್ಲವೇ ಬಸ್ ಪಾಸ್ ಪಡೆದು ಪ್ರಯಾಣಿಸಬೇಕು ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.